ವಿದೇಶ

Hezbollah ಉಗ್ರರಿಂದ ರಾಕೆಟ್ ದಾಳಿ: 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದ Israel!

ಇಸ್ರೇಲ್ ಸರಣಿ ರಾಕೆಟ್ ದಾಳಿ ನಡೆಸಿದ್ದು, ಹೆಜ್ಬುಲ್ಲಾ ವಿರುದ್ಧದ ಪೂರ್ವಾಪೇಕ್ಷಿತ ದಾಳಿ ಇದಾಗಿದೆ ಎಂದು ಹೇಳಿದೆ.

Hezbollah ಉಗ್ರರಿಂದ ರಾಕೆಟ್ ದಾಳಿ: 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದ Israel!
ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶ್ಯ — online desk
Published On :

ಜೆರುಸಲೇಂ: ಹೆಜ್ಬುಲ್ಲಾ ಉಗ್ರರು-ಇಸ್ರೇಲ್ ಪರಸ್ಪರ ನೂರಾರು ರಾಕೆಟ್ ಗಳಿಂದ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಇಸ್ರೇಲ್ ಡ್ರೋಣ್ ದಾಳಿಯಲ್ಲಿ ಹೆಜ್ಬುಲ್ಲಾ ಕಮಾಂಡರ್ ಗಳನ್ನು ಹತ್ಯೆ ಮಾಡಿತ್ತು.

ಇಸ್ರೇಲ್ ಸರಣಿ ರಾಕೆಟ್ ದಾಳಿ ನಡೆಸಿದ್ದು, ಹೆಜ್ಬುಲ್ಲಾ ವಿರುದ್ಧದ ಪೂರ್ವಾಪೇಕ್ಷಿತ ದಾಳಿ ಇದಾಗಿದೆ ಎಂದು ಹೇಳಿದೆ. ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ ತಿಳಿಸಿದೆ. ಇಸ್ರೇಲ್ ಕಡೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪರಸ್ಪರ ನಡೆಯುತ್ತಿರುವ ಭಾರೀ ಗುಂಡಿನ ದಾಳಿಗಳು ಅಮೇರಿಕಾ, ಇರಾನ್ ಮತ್ತು ಪ್ರದೇಶದಾದ್ಯಂತ ಉಗ್ರಗಾಮಿ ಗುಂಪುಗಳನ್ನು ಸಂಪೂರ್ಣ ಯುದ್ಧದಲ್ಲಿ ತೊಡಗುವಂತೆ ಪ್ರಚೋದಿಸುತ್ತಿದೆ. ಇದರಿಂದ ಗಾಜಾದಲ್ಲಿ ಕದನ ವಿರಾಮ ಪ್ರಯತ್ನಗಳಿಗೆ ಅಡ್ಡಿ ಉಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇಸ್ರೇಲಿ ಮಿಲಿಟರಿಯು ಲೆಬನಾನ್‌ನಲ್ಲಿ ಪೂರ್ವಭಾವಿ ದಾಳಿಗಳನ್ನು ಪ್ರಾರಂಭಿಸಿದ ನಂತರ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಭಾನುವಾರ ಬೆಳಿಗ್ಗೆ 06:00 ರಿಂದ 48 ಗಂಟೆಗಳ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.