ಇಮ್ರಾನ್ ಖಾನ್ ಪತ್ನಿ ಊಟದಲ್ಲಿ ಟಾಯ್ಲೆಟ್ ಕ್ಲಿನರ್ ಮಿಶ್ರಣ!
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಇಫ್ತಾರ್ ಊಟದಲ್ಲಿ ಕನಿಷ್ಠ ಎರಡರಿಂದ ಮೂರು ಹನಿ "ಟಾಯ್ಲೆಟ್ ಕ್ಲೀನರ್" ಬೆರೆಸಲಾಗಿದೆ ಎಂದು ಅವರ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಇಫ್ತಾರ್ ಊಟದಲ್ಲಿ ಕನಿಷ್ಠ ಎರಡರಿಂದ ಮೂರು ಹನಿ "ಟಾಯ್ಲೆಟ್ ಕ್ಲೀನರ್" ಬೆರೆಸಲಾಗಿದೆ ಎಂದು ಅವರ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಫೆಬ್ರವರಿ 24 ರಂದು ಶಾಬ್-ಎ-ಬರಾತ್ನಲ್ಲಿ ಕ್ಲೀನರ್ ಆಕೆಯ ಆಹಾರದೊಂದಿಗೆ ಬೆರೆಸಲಾಗಿದೆ ಎಂದು ಆರೋಪಿಸಲಾಗಿದೆ. "ಬುಶ್ರಾ ಬೀಬಿಯ ಇಫ್ತಾರ್ ಊಟಕ್ಕೆ ಎರಡು ಅಥವಾ ಮೂರು ಹನಿ ಟಾಯ್ಲೆಟ್ ಕ್ಲೀನರ್ ಹಾಕಲಾಗಿದೆ ಎಂಬುದು ಕಂಡುಬಂದಿದೆ ಎಂದು ಬುಶ್ರಾ ಬೀಬಿಯ ವಕ್ತಾರ ಮಶಾಲ್ ಯೂಸುಫ್ಜಾಯ್ ಉಲ್ಲೇಖಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.ಊಟ ತಿಂದ ನಂತರ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. 49 ವರ್ಷದ ಬುಶ್ರಾ ಬೀಬಿಗೆ ಟಾಯ್ಲೆಟ್ ಕ್ಲೀನರ್ ಮಿಶ್ರಿತ ಆಹಾರವನ್ನು ನೀಡಲಾಗಿದೆ ಎಂದು ಇಮ್ರಾನ್ ಖಾನ್ ಕೂಡಾ ಹಲವು ಬಾರಿ ಹೇಳಿಕೊಂಡಿದ್ದಾರೆ.
ಬಂಧನಕ್ಕೂ ಮುನ್ನ ಆಕೆಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಯಾವುದೇ ಸಮಸ್ಯೆ ಇರಲಿಲ್ಲ. ಬಂಧನದಿಂದ ಬುಶ್ರಾ ಬೀಬಿ ಅವರ ಆರೋಗ್ಯ ಹದಗೆಟ್ಟಿದೆ, ಏನಾದರೂ ಸಂಭವಿಸಿರಬೇಕು ಎಂದು ಅವರ ವಕ್ತಾರರು ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ವಿಭಿನ್ನ ಪ್ರಕರಣಗಳಲ್ಲಿ ದೋಷಿಯಾಗಿರುವ ಬುಶ್ರಾ ಬೀಬಿಯನ್ನು ಫೆಬ್ರವರಿಯಲ್ಲಿ ಇಸ್ಲಾಮಿಕ್ ನಿಕಾಹ್ ಪ್ರಕರಣದಲ್ಲಿ ದಂಪತಿಗೆ ಶಿಕ್ಷೆ ಆದಾಗಿನಿಂದಲೂ ಬನಿ ಗಾಲಾ ಮನೆಯಲ್ಲಿ ಇರಿಸಲಾಗಿದೆ. ಬನಿ ಗಲಾ ನಿವಾಸವನ್ನು ಮಾಜಿ ಪ್ರಧಾನಿ ಪತ್ನಿಯ ಉಪ ಕಾರಾಗೃಹವಾಗಿ ಪರಿವರ್ತಿಸಲಾಗಿದೆ.
ನ್ಯಾಯಾಲಯ ಅಧಿಕಾರಿಗಳಿಗೆ ಮೂರು ವಾರಗಳ ಕಾಲ ಅವಕಾಶ ನೀಡಿದ್ದರೂ ಬುಶ್ರಾ ಅವರ ವೈದ್ಯಕೀಯ ಪರೀಕ್ಷೆಗಳನ್ನು ಏಕೆ ನಡೆಸಲಿಲ್ಲ ಎಂದು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿಯ ಸಲಹೆಗಾರ ಯೂಸುಫ್ಜೈ ಪ್ರಶ್ನಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಸಹ ಅಲ್-ಶಿಫಾ ಆಸ್ಪತ್ರೆಯಿಂದ ರಕ್ತ ಪರೀಕ್ಷೆಯನ್ನು ಮಾಡಬೇಕೆಂದು ಕೇಳಿಕೊಂಡಿದೆ. ಆಕೆಯ ರಕ್ತದಲ್ಲಿ ವಿಷದ ಅಂಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ರಕ್ತ ಪರೀಕ್ಷೆಯಿಂದ ಬಹಿರಂಗಪಡಿಸಬಹುದು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



