ದುಬೈ ನಲ್ಲಿ ಧಾರಾಕಾರ ಮಳೆ: ಭಾರತಕ್ಕೆ ಬರಬೇಕಿದ್ದ ವಿಮಾನಗಳ ಸಂಚಾರ ರದ್ದು!
ದುಬೈ ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿಮಾನ ನಿಲ್ದಾಣಗಳು ಜಲಾವೃತಗೊಂಡಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ.

ನವದೆಹಲಿ: ದುಬೈ ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿಮಾನ ನಿಲ್ದಾಣಗಳು ಜಲಾವೃತಗೊಂಡಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಏ.16 ರಿಂದ ಭಾರತ, ಪಾಕ್, ಸೌದಿ, ಬ್ರಿಟನ್ ಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಧಾರಾಕಾರ ಮಳೆಯು ಮರುಭೂಮಿ ದೇಶದ ಸುತ್ತಲೂ ವ್ಯಾಪಕವಾದ ಪ್ರವಾಹವನ್ನು ಉಂಟುಮಾಡಿದೆ. ದುಬೈನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಏಪ್ರಿಲ್ 16 ರಂದು ಒಳಬರುವ ಹಲವಾರು ವಿಮಾನಗಳನ್ನು ಬೇರೆಡೆಗೆ ತೆರಳುವಂತೆ ಮಾಡಲಾಯಿತು.
ಪ್ರವಾಹ ಪರಿಸ್ಥಿತಿಯ ಕಾರಣದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಶಾಲೆಗಳನ್ನು ಮುಚ್ಚಲಾಯಿತು.
ದುಬೈ ನಲ್ಲಿ ಮಳೆಗಾಗಿ ಇತ್ತೀಚೆಗೆ ಮೋಡಬಿತ್ತನೆ ಮಾಡಲಾಗಿತ್ತು. ಮಂಗಳವಾರ ಸಂಜೆ 100 ಕ್ಕೂ ಹೆಚ್ಚು ವಿಮಾನಗಳ ಆಗಮನವನ್ನು ನಿರೀಕ್ಷಿಸುತ್ತಿದ್ದ ದುಬೈ ವಿಮಾನ ನಿಲ್ದಾಣ ಚಂಡಮಾರುತದಿಂದ ಉಂಟಾದ ಅವ್ಯವಸ್ಥೆಯಲ್ಲಿ ತನ್ನ ಕಾರ್ಯಾಚರಣೆಯನ್ನು ಸಂಕ್ಷಿಪ್ತವಾಗಿ ಸ್ಥಗಿತಗೊಳಿಸುವ ಅಸಾಮಾನ್ಯ ನಿರ್ಧಾರ ತೆಗೆದುಕೊಂಡಿತು.
ಯುಎಇ ಮತ್ತು ಬಹ್ರೇನ್‌ನಾದ್ಯಂತ ಪ್ರವಾಹಕ್ಕೆ ಕಾರಣವಾದ ಧಾರಾಕಾರ ಮಳೆಯಿಂದ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ ನಿಷ್ಕ್ರಿಯಗೊಂಡಿದೆ ಮತ್ತು ಒಮಾನ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



