ಗಾಜಾ ಆಸ್ಪತ್ರೆ ಸ್ಫೋಟಕ್ಕೆ ಕಾರಣ 'ಅವರೇ' ಇರಬಹುದು: ಇಸ್ರೇಲ್ ನಲ್ಲಿ ಬೈಡನ್; ಹಮಾಸ್ ಖಂಡಿಸಿದ ಅಮೇರಿಕಾ ಅಧ್ಯಕ್ಷ
ತನ್ನ ವಿರುದ್ಧ ದಾಳಿ ನಡೆಸಿದ ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದು, ಅಮೇರಿಕಾ ಯಹೂದಿಗಳ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಟೆಲ್ ಅವಿವ್: ತನ್ನ ವಿರುದ್ಧ ದಾಳಿ ನಡೆಸಿದ ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದು, ಅಮೇರಿಕಾ ಯಹೂದಿಗಳ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜೋ ಬೈಡನ್ ಇಸ್ರೇಲ್ ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ ಆಸ್ಪತ್ರೆಯೊಂದು ಸ್ಫೋಟಗೊಂಡಿದ್ದು, ಈ ಬೆನ್ನಲ್ಲೇ ಹೇಳಿಕೆ ನೀಡಿರುವ ಅಮೇರಿಕಾ ಅಧ್ಯಕ್ಷ, ಈ ಕೃತ್ಯ ನಡೆಸಿರುವುದು ಇಸ್ರೇಲಿ ಸೇನೆಯಲ್ಲ, ಆದರೆ 'ಆ ಕಡೆಯ' ತಂಡದಿಂದ ಈ ಸ್ಫೋಟ ನಡೆದಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿಯೊಂದಿಗೆ ಮಾತನಾಡಿದ ವೇಳೆ ಈ ಸ್ಫೋಟದ ಬಗ್ಗೆ ಉಲ್ಲೇಖಿಸಿರುವ ಜೋ ಬೈಡನ್, ನಾನು ಗಮನಿಸಿರುವ ಪ್ರಕಾರ, ನೀವು ಈ ಕೃತ್ಯ ಎಸಗಿಲ್ಲ. ಆದರೆ ಅವರ ತಂಡ ಇದನ್ನು ನಡೆಸಿದೆ ಎಂದು ಹೇಳಿದ್ದು, ಭಯೋತ್ಪಾದಕ ಹಮಾಸ್ ಅನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಅಲ್ಲಿನ ಹಲವು ಮಂದಿಗೆ ಸ್ಫೋಟಕ್ಕೆ ಕಾರಣ ಏನೆಂದು ನಿಖರವಾಗಿ ತಿಳಿದಿಲ್ಲ ಎಂದೂ ಬೈಡನ್ ಹೇಳಿದ್ದಾರೆ.
ಹಮಾಸ್ ಆಡಳಿತದಲ್ಲಿನ ಗಾಜಾ ಆರೋಗ್ಯ ಸಚಿವರು, ಇಸ್ರೇಲ್ ನ ವೈಮಾನಿಕ ದಾಳಿಯಿಂದಾಗಿ ಆಸ್ಪತ್ರೆ ಸ್ಫೋಟಗೊಂಡಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಇಸ್ರೇಲಿ ಸೈನ್ಯ ತಳ್ಳಿಹಾಕಿದ್ದು, ಮತ್ತೊಂದು ಉಗ್ರ ಸಂಘಟನೆಯಾದ ಇಸ್ಲಾಮಿಕ್ ಜಿಹಾದ್ ಪ್ಯಾಲೆಸ್ತೇನ್ ನಿಂದ ತಪ್ಪಾಗಿ ಹಾರಿಸಿದ ರಾಕೆಟ್ ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಿದೆ. ಆದರೆ ಆ ಸಂಘಟನೆ ಆರೋಪವನ್ನು ನಿರಾಕರಿಸಿದೆ.
ಇಸ್ರೇಲ್ ನಲ್ಲಿದ್ದ ಜೋ ಬೈಡನ್ ಮುಂದೆ ಜೋರ್ಡಾನ್ ಗೆ ಭೇಟಿ ನೀಡಲಿದ್ದಾರೆ. ಆದರೆ ಆಸ್ಪತ್ರೆ ಸ್ಫೋಟ ಘಟನೆಯ ಬಳಿಕ ಬೈಡನ್ ಅರಬ್ ನಾಯಕರೊಂದಿಗಿನ ಸಭೆಯನ್ನು ರದ್ದುಗೊಳಿಸಿದ್ದಾರೆ. ಈ ಸ್ಫೋಟ ಪ್ರಕರಣದಿಂದ ನೆತನ್ಯಾಹು ತೀವ್ರ ದುಃಖ ಮತ್ತು ಆಕ್ರೋಶಗೊಂಡಿದ್ದಾರೆ. ಅ.7 ರ ದಾಳಿಯಲ್ಲಿ ಹಮಾಸ್ ಇಸ್ರೇಲಿಗಳ ನರಮೇಧ ಮಾಡಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


