ವಿದೇಶ

26/11 ರ ದಾಳಿಗೆ ಉಗ್ರ ತರಬೇತಿ ನೀಡಿದ್ದ ಎಲ್ಇಟಿ ಭಯೋತ್ಪಾದಕ ಪಾಕ್ ಜೈಲಿನಲ್ಲಿ ಸಾವು!

2008 ರಲ್ಲಿ ಮುಂಬೈ ಉಗ್ರ ದಾಳಿಗೆ ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಎಲ್ಇಟಿ ಭಯೋತ್ಪಾದಕ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ.

26/11 ರ ದಾಳಿಗೆ ಉಗ್ರ ತರಬೇತಿ ನೀಡಿದ್ದ ಎಲ್ಇಟಿ ಭಯೋತ್ಪಾದಕ ಪಾಕ್ ಜೈಲಿನಲ್ಲಿ ಸಾವು!
ಮುಂಬೈ ದಾಳಿ
Published On :

ಇಸ್ಲಾಮಾಬಾದ್: 2008 ರಲ್ಲಿ ಮುಂಬೈ ಉಗ್ರ ದಾಳಿಗೆ ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಎಲ್ಇಟಿ ಭಯೋತ್ಪಾದಕ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ.

ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ವಿಶ್ವಸಂಸ್ಥೆಯಿಂದ ನಿರ್ಬಂಧ ಎದುರಿಸುತ್ತಿದ್ದ ಭಯೋತ್ಪಾದಕನಾಗಿದ್ದ.
 
ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸಿದ್ದ ಆರೋಪದಡಿ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಪಂಜಾಬ್‌ನ ಮುರಿಡ್ಕೆಯಲ್ಲಿ ಎಲ್‌ಇಟಿ ಪ್ರಧಾನ ಕಚೇರಿಯನ್ನು ಸ್ಥಾಪಿಸಿದ ಭುಟ್ಟವಿ, ಕಾನೂನುಬಾಹಿರ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಮತ್ತು ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ಗೆ ಉಪನಾಯಕರಾಗಿದ್ದ. ಜೆಯುಡಿ ಎಲ್‌ಇಟಿಯ ಪ್ರಮುಖ ಸಂಘಟನೆಯಾಗಿದೆ.

"77 ವರ್ಷದ ಭುಟ್ಟವಿ, ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಅಕ್ಟೋಬರ್ 2019 ರಿಂದ ಲಾಹೋರ್‌ನಿಂದ 60 ಕಿಮೀ ದೂರದಲ್ಲಿರುವ ಜಿಲ್ಲಾ ಜೈಲು ಶೇಖುಪುರದಲ್ಲಿ ಬಂಧಿಯಾಗಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.