ಪಾಕಿಸ್ತಾನ: ಸಿಂಧ್‌ನಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಮಹಿಳೆಯ ಹತ್ಯೆ, 'ಕೊಲೆಗೆ ಬಳಸಿದ್ದ ಆಯುಧ' ಪತ್ತೆ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕಳೆದ ವಾರ ನಡೆದ 44 ವರ್ಷದ ಹಿಂದೂ ಮಹಿಳೆಯ ಹತ್ಯೆಗೆ ಬಳಸಲಾಗಿದೆ ಎಂದು ನಂಬಲಾಗಿರುವ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕಳೆದ ವಾರ ನಡೆದ 44 ವರ್ಷದ ಹಿಂದೂ ಮಹಿಳೆಯ ಹತ್ಯೆಗೆ ಬಳಸಲಾಗಿದೆ ಎಂದು ನಂಬಲಾಗಿರುವ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಯಾ ಭೀಲ್ ಎಂಬುವವರ ವಿರೂಪಗೊಂಡ ಶವ ಡಿಸೆಂಬರ್ 27 ರಂದು ಪ್ರಾಂತ್ಯದ ಸಂಘರ್ ಜಿಲ್ಲೆಯ ಸಿಂಜಿರೋ ಗ್ರಾಮದ ಸಾಸಿವೆ ಗದ್ದೆಯಲ್ಲಿ ಪತ್ತೆಯಾಗಿದ್ದು, ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ.
ಸಿಂಧ್‌ನ ಹೈದರಾಬಾದ್ ನಗರದ ಪೊಲೀಸ್ ತಂಡವು ಕೊಲೆಗೆ ಬಳಸಲಾಗಿದೆ ಎಂದು ಹೇಳಲಾದ ಕುಡುಗೋಲನ್ನು ವಶಪಡಿಸಿಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮಹಿಳೆಯ ಹತ್ಯೆಗೆ ಕುಡುಗೋಲನ್ನು ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಿಂಧ್ ಆರೋಗ್ಯ ಇಲಾಖೆಯ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಪರಾಧ ನಡೆದ ಸ್ಥಳದಲ್ಲಿ ಚಡ್ಡರ್ ಕೂಡ ಬಿದ್ದಿರುವುದು ಕಂಡುಬಂದಿದೆ. ಪರೀಕ್ಷೆಯಿಂದಾಗಿ ತನಿಖಾಧಿಕಾರಿಗಳು, ಕುಡುಗೋಲು ಮತ್ತು ಚಡ್ಡರ್ ಬೆವರಿನ ಗುರುತುಗಳನ್ನು ಹೊಂದಿದೆಯೇ ಎಂದು ತಿಳಿಯಲು ಸಹಾಯ ಮಾಡಲಿದೆ.
ಸಂತ್ರಸ್ತೆಯ ಮಗ ಸೂಮರ್ ಸಾಸಿವೆ ಗದ್ದೆಯಲ್ಲಿ ಹುಡುಕಲು ಹೋದಾಗ ಭೀಲ್ ಅವರ ವಿರೂಪಗೊಂಡ ಶವ ಪತ್ತೆಯಾಗಿದೆ. 'ನಮಗೆ (ಕುಟುಂಬಕ್ಕೆ) ಅತಿಹೆಚ್ಚು ಸಂಕಟವನ್ನುಂಟುಮಾಡಿದ ವಿಚಾರವೆಂದರೆ, ಆಕೆಯನ್ನು ಕೊಂದಿರುವ ವಿಧಾನ' ಎಂದು ಸೂಮರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನನ್ನ ತಾಯಿ ಮನೆಗೆ ಬಾರದಿದ್ದಾಗ, ನಾವು ಆಕೆಯನ್ನು ಹುಡುಕಲು ಹೊರಟೆವು ಮತ್ತು ಹಲವು ಗಂಟೆಗಳ ಹುಡುಕಾಟದ ನಂತರ ನಮಗೆ ಆಕೆಯ ವಿರೂಪಗೊಂಡ ದೇಹವು ಹೊದಲಲ್ಲಿ ಕಾಣಿಸಿತು ಎಂದು ಹೇಳಿದರು.
ಈ ಘಟನೆಯು ಹಿಂದೂ ಸಮುದಾಯದ ನಡುವೆ ಕೋಪಕ್ಕೆ ಕಾರಣವಾಗಿದ್ದು, ಶೀಘ್ರವೇ ಕೊಲೆ ಆರೋಪಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿ ಸಂಘರ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದರು.
ಹತ್ಯೆಯ ತನಿಖೆಗಾಗಿ ಪೊಲೀಸರು ಆರಂಭದಲ್ಲಿ ಜಂಟಿ ತನಿಖಾ ತಂಡವನ್ನು ರಚಿಸಿದರು.
ಹಿಂದೂಗಳು ಪಾಕಿಸ್ತಾನದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ.
ಅಧಿಕೃತ ಅಂದಾಜಿನ ಪ್ರಕಾರ, ದೇಶದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


