ಗಾಜಾ ಕದನವಿರಾಮ ಆಗದು, ಸಾಧ್ಯವಿಲ್ಲ: ನೇತನ್ಯಾಹು
ಗಾಜಾ ಯುದ್ಧದಲ್ಲಿ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.

ಟೆಲ್ ಅವೀವ್: ಗಾಜಾ ಯುದ್ಧದಲ್ಲಿ ಕದನ ವಿರಾಮ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಒಂದು ವೇಳೆ ಕದನ ವಿರಾಮವನ್ನು ಘೋಷಿಸಿದರೆ ಅದು ಹಮಾಸ್ ಗೆ ಶರಣಾಗತಿಯಾಗುತ್ತದೆ ಎಂದು ಬೆಂಜಮಿನ್ ನೇತನ್ಯಾಹು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನೇತನ್ಯಾಹು, ಅ.7ರ ದಾಳಿಯ ವೇಳೆಯಲ್ಲಿ ಹಮಾಸ್ 230 ಒತ್ತೆಯಾಳುಗಳನ್ನಾಗಿಸಿಕೊಂಡವರನ್ನು ಬಿಡುಗಡೆ ಮಾಡಿಸಲು ಬೇರೆ ದೇಶಗಳು ಇಸ್ರೇಲ್ ಗೆ ನೆರವು ನೀಡಬೇಕೆಂದು ಹೇಳಿದ್ದಾರೆ.
ಬೇಷರತ್ತಾಗಿ, ತಕ್ಷಣವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಅಂತಾರಾಷ್ಟ್ರೀಯ ಸಮುದಾಯ ಒತ್ತಾಯಿಸಬೇಕು ಎಂದು ನೇತನ್ಯಾಹು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


