Israel targets Gaza: ಗಾಜಾದಲ್ಲಿ 150 ಸುರಂಗಗಳ ಗುರಿಯಾಗಿಸಿ ಇಸ್ರೇಲ್ ಯುದ್ಧವಿಮಾನಗಳಿಂದ ದಾಳಿ
ಇಸ್ರೇಲಿ ಯುದ್ಧವಿಮಾನಗಳು ಉತ್ತರ ಗಾಜಾದಲ್ಲಿ ತೀವ್ರವಾದ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ ಹಮಾಸ್ ಉಗ್ರರ ಸುಮಾರು 150 "ಸುರಂಗ ಅಡಗುದಾಣ ಗುರಿಗಳನ್ನು'' ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ಹೇಳಿದೆ.

ಟೆಲ್ಅವಿವ್: ಇಸ್ರೇಲಿ ಯುದ್ಧವಿಮಾನಗಳು ಉತ್ತರ ಗಾಜಾದಲ್ಲಿ ತೀವ್ರವಾದ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ ಹಮಾಸ್ ಉಗ್ರರ (Hamas terrorists) ಸುಮಾರು 150 "ಸುರಂಗ ಅಡಗುದಾಣ ಗುರಿಗಳನ್ನು'' ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ಹೇಳಿದೆ.
ಇಸ್ರೇಲ್ ದೇಶದ ಇತಿಹಾಸದಲ್ಲೇ ಹಮಾಸ್ ಉಗ್ರರು ನಡೆಸಿದ ಅತ್ಯಂತ ಭೀಕರ ದಾಳಿಯ ಮೂರು ವಾರಗಳ ನಂತರ ಸೇನೆ ಗಾಜಾದಲ್ಲಿನ ಸುರಂಗ ಗುರಿಗಳನ್ನು ನಾಶಪಡಿಸಿದ ಕುರಿತು ಮೊದಲ ಬಾರಿಗೆ ಅಧಿಕೃತ ಹೇಳಿಕೆ ನೀಡಿದೆ. ಈ ಹೇಳಿಕೆಯಲ್ಲಿ ದಾಳಿಗೊಳಗಾದ ಪ್ರದೇಶಗಳಲ್ಲಿ ಹಮಾಸ್ ಉಗ್ರರ ಸುರಂಗ ಅಡಗುದಾಣಗಳು (underground targets), ಭಯೋತ್ಪಾದಕ ಸುರಂಗಗಳು, ಭೂಗತ ಯುದ್ಧ ಸ್ಥಳಗಳು ಮತ್ತು ಹೆಚ್ಚುವರಿ ಭೂಗತ ಮೂಲಸೌಕರ್ಯಗಳು ಸೇರಿವೆ ಎನ್ನಲಾಗಿದೆ. ಅಲ್ಲದೆ ಈ ದಾಳಿಯಲ್ಲಿ ಹಲವಾರು ಹಮಾಸ್ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ (Israel Army) ಸ್ಪಷ್ಟಪಡಿಸಿದೆ.
ಗಾಜಾ ಪಟ್ಟಿ (Gaza Strip)ಮತ್ತು ದಕ್ಷಿಣ ಇಸ್ರೇಲ್‌ನ ವರದಿಗಾರರು ಶನಿವಾರವೂ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಗಳು (fighter jets) ಮುಂದುವರಿದಿವೆ. ಆದರೆ ಅವು ರಾತ್ರಿಗಿಂತ ಕಡಿಮೆ ತೀವ್ರವಾಗಿವೆ ಎಂದು ಹೇಳಿದರು. ಇಸ್ರೇಲಿ ಮಿಲಿಟರಿಯ ಪ್ರತ್ಯೇಕ ಹೇಳಿಕೆಯಲ್ಲಿ, ದಾಳಿಯು ಹಮಾಸ್ ವಾಯು ದಾಳಿಯ ಮುಖ್ಯಸ್ಥ ಅಸೆಮ್ ಅಬು ರಕಾಬಾ (Abu Rakaba)ನನ್ನು ಕೊಲ್ಲಲಾಗಿದೆ. ಈತ ಯುದ್ಧವನ್ನು ಪ್ರಾರಂಭಿಸಿದ ಅಕ್ಟೋಬರ್ 7 ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅದು ಹೇಳಿದೆ. ಅಂತೆಯೇ ಇಸ್ರೇಲಿ ಮಿಲಿಟರಿ ಪ್ರಕಾರ, ಅಬು ರಕಾಬಾ ಹಮಾಸ್ ಡ್ರೋನ್‌ಗಳು, ಪ್ಯಾರಾಗ್ಲೈಡರ್‌ಗಳು, ವೈಮಾನಿಕ ಪತ್ತೆ ಮತ್ತು ವೈಮಾನಿಕ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
"ಅಬು ರಕಾಬಾ ಪ್ಯಾರಾಗ್ಲೈಡರ್‌ಗಳಲ್ಲಿ ಇಸ್ರೇಲ್‌ಗೆ ನುಸುಳಿರುವ ಭಯೋತ್ಪಾದಕರನ್ನು ನಿರ್ದೇಶಿಸುತ್ತಿದ್ದ. ಮತ್ತು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) (IDF-Israel Defence Forces) ಪೋಸ್ಟ್‌ಗಳ ಮೇಲೆ ಡ್ರೋನ್ ದಾಳಿಗೆ ಕಾರಣನಾಗಿದ್ದ" ಎಂದು ಹೇಳಿಕೆಯೊಂದು ತಿಳಿಸಿದೆ.
ಇನ್ನು ಗಡಿಯಾಚೆಗಿನ ದಾಳಿಯಲ್ಲಿ 1,400 ಜನರು, ಮುಖ್ಯವಾಗಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದ್ದು, ಹಮಾಸ್ ನಡೆಸುತ್ತಿರುವ ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ಸಚಿವಾಲಯವು ಇಸ್ರೇಲ್‌ನ ದಾಳಿಯಲ್ಲಿ 7,300 ಕ್ಕೂ ಹೆಚ್ಚು ಜನರು ಹೆಚ್ಚಾಗಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


