ರಾತ್ರೋರಾತ್ರಿ ಗಾಜಾದಲ್ಲಿ ಸೀಮಿತ ದಾಳಿ ನಡೆಸಿದ ಇಸ್ರೇಲ್ ಸೇನೆ
ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರೆಸಿರುವ ಇಸ್ರೇಲ್ ಸೇನೆ ಭಾನುವಾರ ರಾತ್ರೋರಾತ್ರಿ ಗಾಜಾಪಟ್ಟಿಯಲ್ಲಿ ಸೀಮಿತ ದಾಳಿ ನಡೆಸಿದೆ.

ಟೆಲ್ ಅವೀವ್: ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರೆಸಿರುವ ಇಸ್ರೇಲ್ ಸೇನೆ ಭಾನುವಾರ ರಾತ್ರೋರಾತ್ರಿ ಗಾಜಾಪಟ್ಟಿಯಲ್ಲಿ ಸೀಮಿತ ದಾಳಿ ನಡೆಸಿದೆ.
ಈ ಬಗ್ಗೆ ಸ್ವತಃ ಇಸ್ರೇಲ್ ಸೇನೆ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಲು ಒಟ್ಟುಗೂಡಿರುವ ಸ್ಥಳಗಳನ್ನು ನಾಶಪಡಿಸುವ ಗುರಿಯನ್ನು ಈ ದಾಳಿಗಳು ನಡೆಸಿವೆ ಎಂದು ಸೇನೆ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ 'ಇಸ್ರೇಲ್ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, 'ದೇಶದ ನೆಲದ ಪಡೆಗಳು ಗಾಜಾದೊಳಗೆ ಕೆಲವು ದಾಳಿಗಳನ್ನು ನಡೆಸಿವೆ. "ಶಸ್ತ್ರಸಜ್ಜಿತ ಮತ್ತು ಪದಾತಿದಳ" ಬೆಟಾಲಿಯನ್‌ಗಳಿಂದ ನೆಲದ ದಾಳಿಗಳನ್ನು ನಡೆಸಲಾಗಿದೆ. ರಾತ್ರಿಯಲ್ಲಿ ಟ್ಯಾಂಕ್ ಮತ್ತು ಪದಾತಿ ಪಡೆಗಳಿಂದ ದಾಳಿಗಳು ನಡೆದವು. ಈ ದಾಳಿಗಳು ಯುದ್ಧದಲ್ಲಿ ನಮ್ಮ ಮುಂದಿನ ಹಂತಕ್ಕೆ ತಯಾರಿ ನಡೆಸುತ್ತಿರುವ ಭಯೋತ್ಪಾದಕರ ಪಡೆಗಳನ್ನು ಕೊಲ್ಲುವ ದಾಳಿಗಳಾಗಿವೆ ಎಂದು ಹೇಳಿದರು.
ಅಂತೆಯೇ ನಾಪತ್ತೆಯಾದ ಒತ್ತೆಯಾಳುಗಳ ಮಾಹಿತಿಯನ್ನು ಹುಡುಕಲು ಇಸ್ರೇಲಿ ಪಡೆಗಳು ಪ್ರಯತ್ನಿಸುತ್ತಿವೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನ ನಗರಗಳಿಗೆ ನುಸುಳಿದಾಗ ಮತ್ತು ದಾಳಿ ಮಾಡಿದಾಗ ಹಮಾಸ್ ಕಾರ್ಯಕರ್ತರು 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋಗಿದ್ದರು. ಪ್ರತೀಕಾರವಾಗಿ, ಇಸ್ರೇಲ್ ಹಮಾಸ್-ನಿಯಂತ್ರಿತ ಪ್ಯಾಲೇಸ್ಟಿನಿಯನ್ ಪ್ರದೇಶವನ್ನು ಎರಡು ವಾರಗಳ ಕಾಲ ವೈಮಾನಿಕ ದಾಳಿ ನಡೆಸುತ್ತಿವೆ. ಅಲ್ಲಗೆ ನೆಲದ ಆಕ್ರಮಣಕ್ಕಾಗಿ ಗಾಜಾ ಗಡಿಯಲ್ಲಿ ಸೈನ್ಯವನ್ನು ಸಜ್ಜುಗೊಳಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ "ಗಾಜಾ ಪಟ್ಟಿಯಲ್ಲಿ 320 ಕ್ಕೂ ಹೆಚ್ಚು ಮಿಲಿಟರಿ ಗುರಿಗಳನ್ನು" ನಾಶ ಪಡಿಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
"ಹಮಾಸ್ ಭಯೋತ್ಪಾದಕರನ್ನು ಒಳಗೊಂಡಿರುವ ಸುರಂಗಗಳು, ಹತ್ತಾರು ಕಾರ್ಯಾಚರಣೆಯ ಕಮಾಂಡ್ ಸೆಂಟರ್‌ಗಳು... ಮತ್ತು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕರು, ಮಿಲಿಟರಿ ಘಟಕಗಗಳು ಮತ್ತು ವೀಕ್ಷಣಾ ಪೋಸ್ಟ್‌ಗಳನ್ನು ಒಳಗೊಂಡಿರುವ ಭಯೋತ್ಪಾದಕರ ಗುರಿಗಳಲ್ಲಿ ಸೇರಿದೆ" ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಉತ್ತರ ಗಾಜಾದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ನಿವಾಸಿಗಳು ತಮ್ಮ ಸುರಕ್ಷತೆಗಾಗಿ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಎಚ್ಚರಿಸಿದೆ ಮತ್ತು ವಿಶ್ವಸಂಸ್ಥೆಯ ಪ್ರಕಾರ ಭೂಪ್ರದೇಶದ 2.4 ಮಿಲಿಯನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಈಗ ಸ್ಥಳಾಂತರಗೊಂಡಿದ್ದಾರೆ. ನೂರಾರು ಸಾವಿರ ನಾಗರಿಕರು ಉತ್ತರದಲ್ಲಿ ಗಾಜಾ ನಗರ ಮತ್ತು ಅದರ ಸುತ್ತಲೂ ಉಳಿದುಕೊಂಡಿದ್ದಾರೆ ಎಂದು ನಂಬಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


