ಇಸ್ರೇಲ್-ಗಾಜಾ ಸಂಘರ್ಷ: "ಅಸಾಧಾರಣ ತುರ್ತು" ಸಭೆ ಕರೆದ ಇಸ್ಲಾಮಿಕ್ ರಾಷ್ಟ್ರಗಳ ಗುಂಪು
ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ದಾಳಿ ತೀವ್ರಗೊಳಿಸಿರುವ ಹಿನ್ನಲೆಯಲ್ಲಿ ಇತ್ತ ಇಸ್ಲಾಮಿಕ್ ರಾಷ್ಟ್ರಗಳ ಗುಂಪು 'ಅಸಾಧಾರಣ ತುರ್ತು' ಸಭೆ ಕರೆ ನೀಡಿದೆ.

ನವದೆಹಲಿ: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ದಾಳಿ ತೀವ್ರಗೊಳಿಸಿರುವ ಹಿನ್ನಲೆಯಲ್ಲಿ ಇತ್ತ ಇಸ್ಲಾಮಿಕ್ ರಾಷ್ಟ್ರಗಳ ಗುಂಪು 'ಅಸಾಧಾರಣ ತುರ್ತು' ಸಭೆ ಕರೆ ನೀಡಿದೆ.
ಇಸ್ರೇಲ್-ಗಾಜಾ ಯುದ್ಧದ ಕುರಿತು (Israel-Gaza war) ಚರ್ಚಿಸಲು ಇಸ್ಲಾಮಿಕ್ ರಾಷ್ಟ್ರಗಳ ಉನ್ನತ ಗುಂಪು ಸೌದಿ ಅರೇಬಿಯಾದಲ್ಲಿ “ತುರ್ತು ಸಭೆ” ಕರೆದಿದ್ದು, ಇಸ್ಲಾಮಿಕ್ ಸಹಕಾರ ಸಂಘಟನೆ (OIC) “ಮಿಲಿಟರಿ ಉಲ್ಬಣ” ಮತ್ತು “ಗಾಜಾದಲ್ಲಿ ರಕ್ಷಣೆಯಿಲ್ಲದ ನಾಗರಿಕರಿಗೆ ಇರುವ ಬೆದರಿಕೆ”ಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಇಸ್ಲಾಮಿಕ್ ಶೃಂಗಸಭೆಯ ಪ್ರಸ್ತುತ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿರುವ ಸೌದಿ ಅರೇಬಿಯಾ (Saudi Arabia) ಬುಧವಾರ ಜೆಡ್ಡಾದಲ್ಲಿ ನಡೆಯಲಿರುವ ಸಭೆಗೆ ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿದೆ.
ಸೌದಿ ಅರೇಬಿಯಾದ ಆಹ್ವಾನದ ಮೇರೆಗೆ ಸಂಘಟನೆಯ ಕಾರ್ಯಕಾರಿ ಸಮಿತಿಯು ಗಾಜಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಮಿಲಿಟರಿ ಪರಿಸ್ಥಿತಿ, ನಾಗರಿಕರ ಜೀವನ ಮತ್ತು ಪ್ರದೇಶದ ಒಟ್ಟಾರೆ ಭದ್ರತೆ ಮತ್ತು ಸ್ಥಿರತೆ ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳನ್ನು ಪರಿಹರಿಸಲು ಸಚಿವ ಮಟ್ಟದಲ್ಲಿ ತುರ್ತು ಸಭೆಯನ್ನು ಕರೆಯುತ್ತಿದೆ ಎಂದು ಒಐಸಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ನಾಲ್ಕು ಖಂಡಗಳಲ್ಲಿ ಹರಡಿರುವ 57 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವ ವಿಶ್ವಸಂಸ್ಥೆಯ ನಂತರ ಒಐಸಿ ಎರಡನೇ ಅತಿದೊಡ್ಡ ಸಂಸ್ಥೆಯಾಗಿದೆ. ಇದು ತನ್ನನ್ನು “ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ” ಎಂದು ಕರೆದುಕೊಳ್ಳುತ್ತದೆ. ಸೌದಿ ಅರೇಬಿಯಾ ಇಸ್ರೇಲ್‌ನೊಂದಿಗಿನ ಸಂಬಂಧಗಳನ್ನು ಸಾಮಾನ್ಯೀಕರಿಸುವ ಮಾತುಕತೆಗಳನ್ನು ಸ್ಥಗಿತಗೊಳಿಸಿದ ದಿನದಂದೇ ಈ ತುರ್ತು ಸಭೆಯ ಕರೆಯಲಾಗಿದೆ.
“ಸೌದಿ ಅರೇಬಿಯಾ ಸಂಭವನೀಯ ಸಾಮಾನ್ಯೀಕರಣದ ಕುರಿತು ಚರ್ಚೆಯನ್ನು ನಿಲ್ಲಿಸಲು ನಿರ್ಧರಿಸಿದ್ದು ಮತ್ತು ಅಮೆರಿಕ ಅಧಿಕಾರಿಗಳಿಗೂ ಮಾಹಿತಿ ನೀಡಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


