ವಿದೇಶ

ಖಲೀಸ್ತಾನ ಬೆಂಬಲಿಗರಿಂದ ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರತಿಭಟನೆ

ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನ್ನು ಬೆಂಬಲಿಸಿ ಐತಿಹಾಸಿಕ ಟೈಮ್ಸ್ ಸ್ಕ್ವೇರ್ ಎದುರು ಖಲೀಸ್ತಾನ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿದರು.

ಖಲೀಸ್ತಾನ ಬೆಂಬಲಿಗರಿಂದ ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರತಿಭಟನೆ
ಖಲಿಸ್ತಾನ ಬೆಂಬಲಿಗರಿಂದ ಪ್ರತಿಭಟನೆ
Published On :

ವಾಷಿಂಗ್ ಟನ್: ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನ್ನು ಬೆಂಬಲಿಸಿ ಐತಿಹಾಸಿಕ ಟೈಮ್ಸ್ ಸ್ಕ್ವೇರ್ ಎದುರು ಖಲೀಸ್ತಾನ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿದರು.
 
ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು, ರಿಚ್ಮಂಡ್ ಹಿಲ್ ನಲ್ಲಿರುವ ಬಾಬಾ ಮಖನ್ ಶಾ ಲುಬಾನ ಸಿಕ್ ಕೇಂದ್ರದಿಂದ ಕಾರ್ ರ್ಯಾಲಿ ಪ್ರಾರಂಭಿಸಿ ಟೈಮ್ಸ್ ಸ್ಕ್ವೇರ್ ಬಳಿ ಪೂರ್ಣಗೊಳಿಸಿದರು.

ಟೈಮ್ಸ್ ಸ್ಕ್ವೇರ್ ಬಳಿ ಖಲಿಸ್ತಾನ ಧ್ವಜ ಹಾಗೂ ಎಲ್ ಇಡಿ ಮೊಬೈಲ್ ಬಿಲ್ ಬೋರ್ಡ್ ಗಳನ್ನು ಹೊಂದಿದ ಟ್ರಕ್ ಗಳಲ್ಲಿ ಅಮೃತ್ ಪಾಲ್ ಸಿಂಗ್ ಅವರ ಫೋಟೊಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಭಾಗವಹಿಸಿ ಖಲೀಸ್ತಾನ ಧ್ವಜ ಹಿಡಿದು ಘೋಷಣೆ ಕೂಗಿದ್ದು ವಿಶೇಷವಾಗಿತ್ತು. 

ಪ್ರತಿಭತನಾನಿರತರು ಅಮೃತ್ ಪಾಲ್ ಸಿಂಗ್ ಅವರ ಬಿಡುಗಡೆಗೆ ಆಗ್ರಹಿಸಿದ್ದು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಇದಷ್ಟೇ ಅಲ್ಲದೇ ಟೈಮ್ಸ್ ಸ್ಕ್ವೇರ್ ನ ಬಿಲ್ ಬೋರ್ಡ್ ಗಳಲ್ಲಿ ಅಮೃತ್ ಪಾಲ್ ಸಿಂಗ್ ಅವರ ಫೋಟೋವನ್ನು ಪ್ರದರ್ಶಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.