ಪ್ರಾಂಕ್ ಮಾಡಿದ್ದಕ್ಕೆ 3 ಯುವಕರ ಹತ್ಯೆ: ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನ
ತಮಗೆ ಪ್ರಾಂಕ್ ಮಾಡಿದ 3 ಯುವಕರ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ

ನ್ಯೂಯಾರ್ಕ್: ತಮಗೆ ಪ್ರಾಂಕ್ ಮಾಡಿದ 3 ಯುವಕರ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ
2020 ರಲ್ಲಿ ಡೋರ್ ಬೆಲ್ ಪ್ರಾಂಕ್ ಮಾಡಿದ 16 ವರ್ಷದ ಯುವಕರ ಮೇಲೆ ಉದ್ದೇಶ ಪೂರ್ವಕವಾಗಿ ಕಾರು ಹರಿಸಿದ್ದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿದ್ದರು ಹಾಗೂ ಇನ್ನೂ ಮೂವರು ಯುವಕರಿಗೆ ತೀವ್ರ ಗಾಯಗಳಾಗಿದ್ದವು.
ಅನುರಾಗ್ ಚಂದ್ರ ಎಂಬುವವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ.
ರಿವರ್ಸೈಡ್ ಕೌಂಟಿ ಜ್ಯೂರಿ ಕೇವಲ 3 ಗಂಟೆಗಳಲ್ಲಿ ಚಂದ್ರ ವಿರುದ್ಧದ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದೆ. ಅನುರಾಗ್ ಚಂದ್ರ ಉದ್ದೇಶಪೂರ್ವಕವಾಗಿ ಕಾರನ್ನು ಯುವಕರ ಮೇಲೆ ಹರಿಸಿದ್ದಾರೆ ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. 2020 ರ ಜನವರಿ 19 ರಂದು ಟೆಮೆಸ್ಕಲ್ ಕಣಿವೆ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


