ಚೀನಾ ಶಿಶುವಿಹಾರದಲ್ಲಿ ಚಾಕು ಇರಿತ: 3 ಮಕ್ಕಳು ಸೇರಿದಂತೆ ಆರು ಮಂದಿ ಸಾವು
ಇಂದು ಬೆಳಿಗ್ಗೆ ಶಿಶುವಿಹಾರದಲ್ಲಿ ನಡೆದ ದಾಳಿಯಲ್ಲಿ 3 ಮಕ್ಕಳು ಸೇರಿದಂತೆ ಆರು ಜನರು ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

ಬೀಜಿಂಗ್: ಇಂದು ಬೆಳಿಗ್ಗೆ ಶಿಶುವಿಹಾರದಲ್ಲಿ ನಡೆದ ದಾಳಿಯಲ್ಲಿ 3 ಮಕ್ಕಳು ಸೇರಿದಂತೆ ಆರು ಜನರು ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.
ಲಿಯಾಂಜಿಯಾಂಗ್ ಕೌಂಟಿಯ ಪೊಲೀಸರ ಹೇಳಿಕೆಯಂತೆ ಇದೊಂದು “ಉದ್ದೇಶಪೂರ್ವಕ ಹಲ್ಲೆ” ಎಂದು ಹೇಳಿದ್ದು ಘಟನೆಗೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಲಿಪಶುಗಳಲ್ಲಿ ಒಬ್ಬ ಶಿಕ್ಷಕ, ಇಬ್ಬರು ಪೋಷಕರು ಮತ್ತು ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಸರ್ಕಾರಿ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ದಾಳಿಯಲ್ಲಿ ಒಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ. ದಾಳಿಯು ಬೆಳಿಗ್ಗೆ 7:40 ಕ್ಕೆ ನಡೆದಿದ್ದು, ಇದಾದ ಕೆಲವೇ ನಿಮಿಷಗಳ ನಂತರ ಶಂಕಿತನನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಮೃತಪಟ್ಟವರಲ್ಲಿ ಓರ್ವ ಶಿಕ್ಷಕ, ಇಬ್ಬರು ಪೋಷಕರು ಮತ್ತು ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ. ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಇದನ್ನು ಉದ್ದೇಶಪೂರ್ಕ ಹಲ್ಲೆ ಎಂದು ಕರೆದಿದ್ದಾರೆ. ಯಾವುದೋ ದುರುದ್ದೇಶದಿಂದಲೇ ಹಲ್ಲೆ ನಡೆಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


