ಬೆಲೆ ಏರಿಕೆ ವದಂತಿ; ಪಾಕಿಸ್ತಾನದಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತ ಗ್ರಾಹಕರು
ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗುವ ವದಂತಿಗಳ ಪರಿಣಾಮವಾಗಿ ಪಾಕಿಸ್ತಾನದ ಹಲವು ಭಾಗಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಸ್ಲಮಾಬಾದ್: ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗುವ ವದಂತಿಗಳ ಪರಿಣಾಮವಾಗಿ ಪಾಕಿಸ್ತಾನದ ಹಲವು ಭಾಗಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವರದಿಗಳ ಪ್ರಕಾರ, ಫೆಬ್ರುವರಿ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 45 ರಿಂದ 80 ರೂಪಾಯಿಗಳವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿತ್ತು.
ಡಾಲರ್ ಮೌಲ್ಯ ಮತ್ತು ಅಂತರರಾಷ್ಟ್ರೀಯ ಪೆಟ್ರೋಲಿಯಂ ದರಗಳಲ್ಲಿನ ಏರಿಕೆಯಿಂದಾಗಿ ತೈಲ ಬೆಲೆಗಳು ಹೆಚ್ಚಾಗುತ್ತವೆ ಎಂಬ ವರದಿಯನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ ಎಂದು ಪೆಟ್ರೋಲ್ ಪಂಪ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಹಾಸನ್ ಹೇಳಿದ್ದಾಗಿ ಡಾನ್ ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಇತರ ಪ್ರದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಗುಜ್ರಾನ್‌ವಾಲಾದಲ್ಲಿ ಶೇ 20 ರಷ್ಟು ಪಂಪ್‌ಗಳಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿತ್ತು, ಆದರೆ ರಹೀಮ್ ಯಾರ್ ಖಾನ್, ಬಹವಾಲ್‌ಪುರ್, ಸಿಯಾಲ್‌ಕೋಟ್ ಮತ್ತು ಫೈಸಲಾಬಾದ್‌ನಲ್ಲಿಯೂ ತೀವ್ರ ಕೊರತೆ ಉಂಟಾಗಿರುವುದಾಗಿ ವರದಿಯಾಗಿದೆ ಎಂದು ಜಿಯೋ ನ್ಯೂಸ್ ಹೇಳಿದೆ.
ಇದನ್ನೂ ಓದಿ: ಬಜೆಟ್ ಅಂದಾಜಿನಲ್ಲಿ 2 ಟ್ರಿಲಿಯನ್ ರೂಪಾಯಿ ವ್ಯತ್ಯಾಸ: ಸಾಲದ ಮಹತ್ವದ ಮಾತುಕತೆಗೂ ಮುನ್ನ ಪಾಕ್ ಗೆ ಐಎಂಫ್
ಆದಾಗ್ಯೂ, ಈ ವದಂತಿಗಳು ಆಧಾರರಹಿತವಾಗಿವೆ ಮತ್ತು ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಜನರಿಗೆ ಮನವಿ ಮಾಡಿದ್ದು, ಮುಂದಿನ ಎರಡು ವಾರಗಳ ಬೆಲೆ ಪರಿಷ್ಕರಣೆಯನ್ನು ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ ಇನ್ನೂ ಸಿದ್ಧಪಡಿಸಿಲ್ಲ ಎಂದು ಅಧಿಕಾರಿಯೊಬ್ಬರು ಡಾನ್‌ಗೆ ತಿಳಿಸಿದ್ದಾರೆ.
ರೂಪಾಯಿ ಅಪಮೌಲ್ಯ ಮತ್ತು ಅಂತರರಾಷ್ಟ್ರೀಯ ತೈಲ ಬೆಲೆಗಳ ಪ್ರಭಾವವನ್ನು ಲೆಕ್ಕ ಹಾಕಿದರೆ, ಫೆಬ್ರುವರಿ 15 ರಿಂದ ಪ್ರಾರಂಭವಾಗುವ ಹದಿನೈದು ದಿನಗಳ ಲೆಕ್ಕಾಚಾರದಲ್ಲಿ ಅದು ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


