ವಿದೇಶ

ಹಾಂಗ್ ಕಾಂಗ್ ಮಾಡೆಲ್ ಅಬ್ಬಿ ಚೋಯ್ ಹತ್ಯೆ: ಮಾಡೆಲ್ ನ ಮಾಜಿ ಪತಿ, ಅತ್ತೆ ವಿರುದ್ಧ ಕೊಲೆ ಆರೋಪ

ಹಾಂಗ್ ಕಾಂಗ್ ಜನಪ್ರಿಯ ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ಅಬ್ಬಿ ಚೋಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ.

ಹಾಂಗ್ ಕಾಂಗ್ ಮಾಡೆಲ್ ಅಬ್ಬಿ ಚೋಯ್ ಹತ್ಯೆ: ಮಾಡೆಲ್ ನ ಮಾಜಿ ಪತಿ, ಅತ್ತೆ ವಿರುದ್ಧ ಕೊಲೆ ಆರೋಪ
ಅಬ್ಬಿ ಚೋಯ್
Published On :

ಹಾಂಗ್ ಕಾಂಗ್ ಜನಪ್ರಿಯ ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ಅಬ್ಬಿ ಚೋಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ ಮಾಡಲಾಗಿದ್ದು ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಮಾಜಿ ಪತಿ ಅಲೆಕ್ಸ್ ಕ್ವಾಂಗ್, ಅವರ ತಾಯಿ ಜೆನ್ನಿ ಲೀ, ತಂದೆ ಕ್ವಾಂಗ್ ಕೌ ಮತ್ತು ಅವರ ಸಹೋದರ ಆಂಥೋನಿ ಕ್ವಾಂಗ್ ವಿರುದ್ಧ ಮಾಡೆಲ್ ಅಬ್ಬಿ ಚೋಯ್ ಅವರ ಕೊಲೆ ಆರೋಪ ಹೊರಿಸಲಾಗಿದ್ದು ನಾಲ್ವರಿಗೂ ಜಾಮೀನು ಸಿಕ್ಕಿಲ್ಲ.

ಫ್ಯಾಶನ್ ಮ್ಯಾಗಜೀನ್‌ಗಳಲ್ಲಿ ಕಾಣಿಸಿಕೊಂಡಿದ್ದ ಅಬ್ಬಿ ಚೋಯ್ ಇನ್‌ಸ್ಟಾಗ್ರಾಮ್‌ನಲ್ಲಿ 100,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕಳೆದ ಮಂಗಳವಾರ ಕಾಣೆಯಾಗಿದ್ದಾರೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಇದಾದ ನಂತರ ಕಡಲತೀರದ ಮನೆಯ ಫ್ರಿಜ್ ನಲ್ಲಿ ಭಾಗಶಃ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

28 ವರ್ಷದ ಮಾಜಿ ಪತಿ ಅಲೆಕ್ಸ್ ಕ್ವಾಂಗ್ ಮತ್ತು ಅವರ ತಂದೆ ಕ್ವಾಂಗ್ ಕೌ ಮತ್ತು ಸಹೋದರ ಆಂಥೋನಿ ಕ್ವಾಂಗ್ ವಿರುದ್ಧ ಸೋಮವಾರ ಕೊಲೆ ಆರೋಪ ಹೊರಿಸಲಾಗಿದ್ದು, ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇನ್ನು ಚೋಯ್ ಅವರ ಮಾಜಿ ಅತ್ತೆ, ಜೆನ್ನಿ ಲಿ, ಸಾಕ್ಷ್ಯವನ್ನು ನಾಶಪಡಿಸುವ ಮೂಲಕ ನ್ಯಾಯದ ಹಾದಿಯನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪತಿ ಅಲೆಕ್ಸ್ ಕ್ವಾಂಗ್ ವಿಚ್ಛೇದನ ಪಡೆದು ಜೀವಿಸುತ್ತಿದ್ದ ಅಬ್ಬಿ ಚೋಯ್ ಆಸ್ತಿಯ ವಿಚಾರವಾಗಿ ಆಗಾಗ ಮಾಜಿ ಪತಿ ಹಾಗೂ ಅವರ ಮನೆಯವರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು. ಅಬ್ಬಿ ಚೋಯ್ ಅವರ ಬಳಿ ಇರುವ ಆಸ್ತಿಯ ವಿಚಾರವಾಗಿ ಅನೇಕ ಬಾರಿ ಮಾಜಿ ಪತಿ ಹಾಗೂ ಅವರ ಮನೆಯವರು ಜಗಳಕ್ಕೆ ಬರುತ್ತಿದ್ದರು. ಇದೇ ವಿಚಾರಕ್ಕೆ ಅಬ್ಬಿ ಚೋಯ್ ಅವರನ್ನು ಮಾಜಿ ಪತಿ ಹಾಗೂ ಅವರ ಮನೆಯವರು ಈ ದುಷ್ಕೃತ್ಯ ಎಸಗಿರಬಹುದು ಎಂದು ಶಂಕಿಸಿದ್ದಾರೆ.

ಮೂರು ಅಂತಸ್ತಿನ ಬಾಡಿಗೆ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಮಾಂಸ ಕತ್ತರಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ರೈನ್‌ ಕೋಟ್‌, ಗ್ಲೌಸ್‌, ಮಾಸ್ಕ್ ಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ಬಾಡಿಗೆ ಮನೆಯನ್ನು ಕಸಾಯಿಖಾನೆಯಂತೆ ಬಳಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಬ್ಬಿ ಚೋಯ್ ಅವರ ಮಾಜಿ ಪತಿ ದೇಶ ಬಿಟ್ಟು ಓಡಿ ಹೋಗಲು ಬೋಟ್‌ ಗಾಗಿ ಕಾಯುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.