ಜಾರ್ಜಿಯಾದಲ್ಲಿ ಬಂಧನದ ಬಳಿಕ ಟ್ರಂಪ್ ಚುನಾವಣಾ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಸಂಗ್ರಹ
ಚುನಾವಣಾ ವಂಚನೆ ಪ್ರಕರಣದಲ್ಲಿ ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅವರ ಮುಂದಿನ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ.

ನವದೆಹಲಿ: ಚುನಾವಣಾ ವಂಚನೆ ಪ್ರಕರಣದಲ್ಲಿ ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅವರ ಮುಂದಿನ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ.
ಕಳೆದ 3 ವಾರಗಳಿಂದ ಟ್ರಂಪ್ ಚುನಾವಣಾ ಪ್ರಚಾರಕ್ಕೆ 20 ಮಿಲಿಯನ್ ಡಾಲರ್ ಸಂಗ್ರಹವಾಗಿದೆ.
ಜಾರ್ಜಿಯಾದಲ್ಲಿ ಟ್ರಂಪ್ ಬಂಧನಕ್ಕೊಳಗಾದ ನಂತರದ ಸಮಯವೊಂದರಲ್ಲೇ 4.18 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. ಇಡೀ ಚುನಾವಣಾ ಪ್ರಚಾರದ ಚಟುವಟಿಕೆಗಳಲ್ಲಿ ಒಂದೇ ದಿನದಲ್ಲಿ ಬಂದಿರುವ ಗರಿಷ್ಠ ಪ್ರಮಾಣದ ಹಣ ಇದಾಗಿದೆ.
ನಿಧಿಸಂಗ್ರಹದ ಅಂಕಿ-ಅಂಶಗಳನ್ನು ಮೊದಲು ಪೊಲಿಟಿಕೊ ವರದಿ ಮಾಡಿದೆ.
ಟ್ರಂಪ್ ಬಂಧನದ ನಂತರ ಅವರ 2024 ರ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ವಿಷಯ ಮಾರಾಟದ ಸರಕಾಗಿ ಮಾರ್ಪಟ್ಟಿದ್ದು, ಮಾರ್ಚ್‌ನಿಂದ ನಾಲ್ಕು ಬಾರಿ ದೋಷಾರೋಪಣೆಗೆ ಗುರಿಯಾಗಿರುವ ಟ್ರಂಪ್, ಮತ್ತಷ್ಟು ಪ್ರಬಲರಾಗುವತ್ತ ಗಮನಹರಿಸಿದ್ದಾರೆ.
ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ 90 ನಿಮಿಷಗಳ ಕಾಲ ವ್ಯಾಪಕವಾಗಿ ಟಿ-ಶರ್ಟ್, ಮಗ್, ಕೂಜಿ (ಟಿನ್ ಮಾದರಿಯ ವಸ್ತು) ಬಂಪರ್ ಸ್ಟಿಕರ್ ಗಳಲ್ಲಿ ಟ್ರಂಪ್ ಫೋಟೋಗಳು ರಾರಾಜಿಸುತ್ತಿದ್ದವು, ಇದರಲ್ಲಿ ಎಂದಿಗೂ ಶರಣಾಗಬೇಡ ("NEVER SURRENDER!") ಎಂಬ ಸಂದೇಶವನ್ನು ಮುದ್ರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


