ಆಕಸ್ಮಿಕವಾಗಿ ತನ್ನದೇ ನಗರದ ಮೇಲೆ ಬಾಂಬ್ ಸ್ಫೋಟಿಸಿದ ರಷ್ಯಾ!
ಉಕ್ರೇನ್ ಗಡಿಯಲ್ಲಿರುವ ರಷ್ಯಾದ ನಗರವೊಂದರಲ್ಲಿ ನಿನ್ನೆ ಪ್ರಬಲ ಬಾಂಬ್ ಸ್ಫೋಟವಾಗಿದೆ. ಆದರೆ, ಅಲ್ಲಿನ ನಿವಾಸಿಗಳು ಇದು ಶತ್ರುಗಳ ಪ್ರತೀಕಾರ ಎಂದು ಭಾವಿಸಿದರೆ, ತನ್ನದೇ ಆದ ಯುದ್ಧವಿಮಾನಗಳಿಂದ ಆಕಸ್ಮಿಕವಾಗಿ ಬೀಳಿಸಿದ ಬಾಂಬ್ ಎಂದು ರಷ್ಯಾ ಮಿಲಿಟರಿ ಒಪ್ಪಿಕೊಂಡಿದೆ.

ಮಾಸ್ಕೋ: ಉಕ್ರೇನ್ ಗಡಿಯಲ್ಲಿರುವ ರಷ್ಯಾದ ನಗರವೊಂದರಲ್ಲಿ ನಿನ್ನೆ ಪ್ರಬಲ ಬಾಂಬ್ ಸ್ಫೋಟವಾಗಿದೆ. ಆದರೆ, ಅಲ್ಲಿನ ನಿವಾಸಿಗಳು ಇದು ಶತ್ರುಗಳ ಪ್ರತೀಕಾರ ಎಂದು ಭಾವಿಸಿದರೆ, ತನ್ನದೇ ಆದ ಯುದ್ಧವಿಮಾನಗಳಿಂದ ಆಕಸ್ಮಿಕವಾಗಿ ಬೀಳಿಸಿದ ಬಾಂಬ್ ಎಂದು ರಷ್ಯಾ ಮಿಲಿಟರಿ ಒಪ್ಪಿಕೊಂಡಿದೆ.
ಗಡಿಯಿಂದ ಪೂರ್ವಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಬೆಲ್ಗೊರೊಡ್ ನಲ್ಲಿ ನಿಯಮಿತವಾಗಿ ಡ್ರೋನ್ ದಾಳಿ ನಡೆಸಲಾಗುತ್ತಿದೆ ಎಂದು ರಷ್ಯಾದ ಆಡಳಿತ ಉಕ್ರೇನ್ ಮಿಲಿಟರಿಯನ್ನು ದೂಷಿಸುತಿತ್ತು. ಆದರೆ, ಗುರುವಾರ ತಡರಾತ್ರಿ ಸಂಭವಿಸಿದ ಸ್ಫೋಟವು ಪ್ರಬಲವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಫೋಟದ ನಂತರ ಅಪಾರ್ಟ್ ಮೆಂಟ್ ಕಟ್ಟಡಗಳು ನಡುಗುವಂತೆ ಭಾಸವಾಯಿತು. ಅಂಗಡಿಯ ಛಾವಣಿ ಮೇಲೆ ಕಾರೊಂದನ್ನು ಎಸೆಯಲಾಯಿತು. ಕಟ್ಟಡಗಳು ಕಿಟಕಿಗಳು ಮುರಿದು ಹಲವಾರು ಕಾರುಗಳಿಗೆ ಹಾನಿ ಉಂಟಾಯಿತು. ಇಬ್ಬರು ನಿವಾಸಿಗಳು ಗಾಯಗೊಂಡು, ಮತ್ತೋರ್ವವನ್ನು ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಇದು ತನ್ನದೇ ಆದ Su-34 ಬಾಂಬರ್‌ಗಳಿಂದ ಆಕಸ್ಮಿಕವಾಗಿ ಕೈಬಿಟ್ಟ ಆಯುಧದಿಂದ ಸ್ಫೋಟ ಸಂಭವಿಸಿದೆ ಎಂದು ಘಟನೆ ನಡೆದ ಒಂದು ಗಂಟೆಯ ನಂತರ ರಷ್ಯಾ ರಕ್ಷಣಾ ಸಚಿವಾಲಯ ಒಪ್ಪಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


