ವಿದೇಶ

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ದುಬೈಗೆ ಗಡಿಪಾರು; ವದಂತಿ

ತೀವ್ರ ಪ್ರತಿಭಟನೆ ಬಳಿಕ ಪರಾರಿಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ದುಬೈಗೆ ಗಡಿಪಾರು ಮಾಡಲಾಗಿದೆ ಊಹಾಪೋಹದ ನಡುವೆ ಸೋಮವಾರ ಅವರನ್ನು ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ...

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ದುಬೈಗೆ ಗಡಿಪಾರು; ವದಂತಿ
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ
Published On :

ಕೊಲಂಬೊ: ತೀವ್ರ ಪ್ರತಿಭಟನೆ ಬಳಿಕ ಪರಾರಿಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ದುಬೈಗೆ ಗಡಿಪಾರು ಮಾಡಲಾಗಿದೆ ಊಹಾಪೋಹದ ನಡುವೆ  ಸೋಮವಾರ ಅವರನ್ನು ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ವಾಯುನೆಲೆಗೆ ಕೊಂಡೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಟಬಯ ರಾಜಪಕ್ಸೆ ದೇಶದಲ್ಲೇ ಇರುವ ಬಗ್ಗೆ ಅಧ್ಯಕ್ಷರ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಹಲವಾರು ಸ್ಥಳೀಯ ಮಾಧ್ಯಮ ವರದಿಗಳು ಅವರು ಸೋಮವಾರದ ನಂತರ ದುಬೈಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಪಕ್ಸೆ ಅವರು ಶನಿವಾರದಂದು ಕೊಲಂಬೊದಲ್ಲಿನ ಅಧ್ಯಕ್ಷೀಯ ಅರಮನೆಯಿಂದ ನೌಕಾಪಡೆಯ ರಕ್ಷಣೆಯಲ್ಲಿ ಪಲಾಯನ ಮಾಡಿದರು. ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷರ ಅರಮನೆಯನ್ನು ಅತಿಕ್ರಮಿಸುವ ಸ್ವಲ್ಪ ಸಮಯದ ಮೊದಲು ಲಗೇಜ್ ಸಮೇತ ಪರಾರಿಯಾಗುತ್ತಿರುವ ವಿಡಿಯೋ ಹರಿದಾಡಿತ್ತು. ಶಾಂತಿಯುತ ಅಧಿಕಾರ ಪರಿವರ್ತನೆಗೆ ಅವಕಾಶ ನೀಡಲು ರಾಜಪಕ್ಸೆ ಬುಧವಾರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ದಿನಾಂಕವನ್ನು ನಿರ್ದಿಷ್ಟಪಡಿಸದೆ ರಾಜಪಕ್ಸೆ ಅವರು ರಾಜೀನಾಮೆ ನೀಡುವ ಉದ್ದೇಶವನ್ನು ಅಧಿಕೃತವಾಗಿ ಹೇಳಿದ್ದಾರೆ ಎಂದು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿ ತಿಳಿಸಿದೆ.

ಅಧ್ಯಕ್ಷೀಯ ಅರಮನೆಯಲ್ಲಿ ರಾಜಪಕ್ಸೆ ಬಿಟ್ಟು ಹೋಗಿದ್ದ 17.85 ಮಿಲಿಯನ್ ರೂಪಾಯಿ(ಸುಮಾರು $50,000) ನಗದನ್ನು ಪ್ರತಿಭಟನಾಕಾರರು ನ್ಯಾಯಾಲಯಕ್ಕೆ ಹಸ್ತಾಂತರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ದಾಖಲೆಗಳ ಸಂಪೂರ್ಣ ಸೂಟ್‌ಕೇಸ್ ಅನ್ನು ಸಹ ಬಿಟ್ಟು ಹೋಗಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜಪಕ್ಸೆ ಭರವಸೆಯಂತೆ ಕೆಳಗಿಳಿದರೆ, ನವೆಂಬರ್ 2024 ರಲ್ಲಿ ಕೊನೆಗೊಳ್ಳುವ ತನ್ನ ಅವಧಿಯನ್ನು ಪೂರೈಸಲು ಸಂಸತ್ತು ಸಂಸದರನ್ನು ಆಯ್ಕೆ ಮಾಡುವವರೆಗೆ ವಿಕ್ರಮಸಿಂಘೆ ಸ್ವಯಂಚಾಲಿತವಾಗಿ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಆದರೆ ಏಕೀಕೃತ ಸರ್ಕಾರ ರಚನೆಗೆ ಒಮ್ಮತ ಮೂಡಿದರೆ ಅಧಿಕಾರದಿಂದ ಕೆಳಗಿಳಿಯುವುದಾಗಿ ಸ್ವತಃ ವಿಕ್ರಮಸಿಂಘೆ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.