ವಿದೇಶ

ಶ್ರೀಲಂಕಾ ಅಧ್ಯಕ್ಷರ ಅರಮನೆಯಲ್ಲೀಗ ಪ್ರಜೆಗಳ ಸಾಮ್ರಾಜ್ಯ; ಊಟ, ಜಿಮ್ ಮಾಡುತ್ತಾ ಎಂಜಾಯ್ ಮಾಡಿದ ಜನರು- ವಿಡಿಯೋ

ಶ್ರೀಲಂಕಾ ಅಧ್ಯಕ್ಷರ ಅರಮನೆಯಲ್ಲೀಗ ಪ್ರಜೆಗಳದ್ದೇ ಸಾಮ್ರಾಜ್ಯವಾಗಿದೆ. ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಾ, ಊಟ, ಜಿಮ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಶ್ರೀಲಂಕಾ ಅಧ್ಯಕ್ಷರ ಅರಮನೆಯಲ್ಲೀಗ ಪ್ರಜೆಗಳ ಸಾಮ್ರಾಜ್ಯ; ಊಟ, ಜಿಮ್ ಮಾಡುತ್ತಾ ಎಂಜಾಯ್ ಮಾಡಿದ ಜನರು- ವಿಡಿಯೋ
ಶ್ರೀಲಂಕಾ ಅಧ್ಯಕ್ಷರ ಅರಮನೆ
Published On :

ಕೊಲಂಬೋ: ತೀವ್ರ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ನೆರೆಯ ಶ್ರೀಲಂಕಾದಲ್ಲಿ ಜನರ ಸಹನೆಯ ಕಟ್ಟೆ ಒಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ.

ಜನರ ಆಕ್ರೋಶಕ್ಕೆ ಹೆದರಿ ಗೊಟಬಯ ಅವರು ಅರಮನೆ ತೊರೆದಿದ್ದು, ಇದೀಗ ಪ್ರತಿಭಟನಾಕಾರರು ತಮ್ಮ ಕುಟುಂಬ, ಮಕ್ಕಳೊಂದಿಗೆ ತೆರಳಿ, ಅರಮನೆಯಲ್ಲಿ ಸುತ್ತಾಡುತ್ತಾ, ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಾ, ಅಲ್ಲಿಯೇ ಊಟ, ಜಿಮ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಅಪಾರ ಪ್ರಮಾಣದಲ್ಲಿ ಅರಮನೆಯತ್ತ ಧಾವಿಸುತ್ತಿರುವ ಜನರು, ಅರಮನೆ ತುಂಬೆಲ್ಲಾ ಓಡಾಡುತ್ತಾ, ಸೆಲ್ಫಿ, ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ. ಇದೀಗ ಭ್ರಷ್ಟಾಚಾರದಿಂದ ಮುಕ್ತರಾಗಿದ್ದೇವೆ. ಇದು ಶಾಂತಯುತವಾಗಿದೆ. ಕುಟುಂಬ, ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.