ನಿರ್ಬಂಧಗಳಿಂದ ಮಾನವೀಯ ನೆರವುಗಳಿಗೆ ವಿನಾಯಿತಿ ನಿರ್ಣಯ: ಮತ ಚಲಾಯಿಸದೇ ತಟಸ್ಥವಾಗಿ ಉಳಿದ ಭಾರತ
ನಿರ್ಬಂಧ ಎದುರಿಸುತ್ತಿರುವವರಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ.

ನವದೆಹಲಿ: ನಿರ್ಬಂಧ ಎದುರಿಸುತ್ತಿರುವವರಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ.
ತನ್ನ ನೆರೆ ರಾಷ್ಟ್ರದಲ್ಲಿರುವ ಭಯೋತ್ಪಾದಕ ಗುಂಪು ಸೇರಿದಂತೆ ನಿರ್ಬಂಧ ಎದುರಿಸುತ್ತಿರುವ ಹಲವು ಭಯೋತ್ಪಾದಕ ಸಂಘಟನೆಗಳು ಇಂತಹ ವಿನಾಯಿತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಹಾಗೂ ಈ ಮೂಲಕ ದೇಣಿಗೆ ಗಳಿಸಿ, ತನಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.
15 ರಾಷ್ಟ್ರಗಳ ಮಂಡಳಿಯಲ್ಲಿ ಭಾರತ ಅಧ್ಯಕ್ಷತೆ ವಹಿಸಿದೆ. ನಿರ್ಣಯವನ್ನು ಅಮೇರಿಕ ಹಾಗೂ ಐರ್ಲೇಂಡ್ ಗಳು ಮಂಡಿಸಿದ್ದವು.
ಈ ನಿರ್ಣಯವನ್ನು ಅಂಗೀಕರಿಸಿದ ಬಳಿಕ ಹಲವು ಜೀವಗಳು ಉಳಿಯಲಿದೆ ಎಂದು ನಿರ್ಣಯ ಮಂಡಿಸಿದ ಅಮೇರಿಕ, ಐರ್ಲೆಂಡ್ ಹೇಳಿವೆ. 14 ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಒಂದೇ ತಟಸ್ಥವಾಗಿ ಉಳಿದ ರಾಷ್ಟ್ರವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


