ಭಾರತ, ಅಮೆರಿಕಾ ಕಳವಳದ ನಡುವೆಯೂ ಲಂಕಾ ಬಂದರಿಗೆ ಚೀನಾದ ಸರ್ವೇಕ್ಷಣಾ ನೌಕೆ ಆಗಮನ!
ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಬಂದಿಳಿದಿದೆ.

ಹಂಬನ್‌ತೋಟ(ಶ್ರೀಲಂಕಾ): ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಬಂದಿಳಿದಿದೆ.
ಯುವಾನ್ ವಾಂಗ್ 5 ನೌಕೆಯನ್ನು ಶ್ರೀಲಂಕಾ ಬಂದರು ಅಧಿಕಾರಿಗಳು ಹಾಗೂ ಹಡಗು ಕಂಪನಿಯ ಚೀನಾದ ಅಧಿಕಾರಿಗಳು ಹಂಬನ್‌ತೋಟ ಬಂದರಿನಲ್ಲಿ ಸ್ವಾಗತಿಸಿದರು. ನೌಕೆಯ ಆಗಮನವು ಭಾರತದ ಕಳವಳಕ್ಕೆ ಕಾರಣವಾಗಿದ್ದು ಅಲ್ಲದೆ ಭಾರತ ಮತ್ತು ಚೀನಾ ನಡುವಿನ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಹಡಗು ಆಗಸ್ಟ್ 11ರಂದೇ ಹಂಬನ್‌ತೋಟಗೆ ಆಗಮಿಸಬೇಕಿತ್ತು. ಆದರೆ ಭಾರತ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಾಲೋಚನೆಗಳು ನಡೆಯುವವರೆಗೂ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಚೀನಾವನ್ನು ಕೇಳಿಕೊಂಡಿತ್ತು.
ಇದನ್ನೂ ಓದಿ: ವಿವಾದಾತ್ಮಕ ಚೀನಾ ಹಡಗು ಪ್ರವೇಶಕ್ಕೆ ಲಂಕಾ ಅನುಮತಿ!
ಇದೀಗ ಸುದೀರ್ಘ ಮಾತುಕತೆ ಬಳಿಕ ನೌಕೆಗೆ ಹಂಬನ್‌ತೋಟದಲ್ಲಿ ಆ.22ರ ವರೆಗೆ ಲಂಗರು ಹಾಕಲು ಅನುಮತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ನೌಕೆ ತನ್ನ ಗುರುತಿನ ವ್ಯವಸ್ಥೆಗಳನ್ನು ಇರಿಸಿಕೊಳ್ಳಲು ಜೊತೆಗೆ ಶ್ರೀಲಂಕಾ ನೀರಿನಲ್ಲಿ ಯಾವುದೇ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಎರಡು ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಭಾರತ ಸೋಮವಾರ ತನ್ನ ಕಡಲ ಭದ್ರತೆಯನ್ನು ಬಲಪಡಿಸಲು ಶ್ರೀಲಂಕಾಕ್ಕೆ ಸಮುದ್ರ ವಿಚಕ್ಷಣ ವಿಮಾನವನ್ನು ಉಡುಗೊರೆಯಾಗಿ ನೀಡಿತ್ತು. ಭಾರತಕ್ಕೆ ತರಬೇತಿ ನೀಡಿದ ಶ್ರೀಲಂಕಾದ ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಭಾರತೀಯ ಸಿಬ್ಬಂದಿಯ ಕಾರ್ಯಾಚರಣೆಯ ಬೆಂಬಲದೊಂದಿಗೆ ವಿಮಾನವನ್ನು ನಿರ್ವಹಿಸುತ್ತಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


