ಅಮೆರಿಕ: ವಾಲ್ಮಾರ್ಟ್ ಸ್ಟೋರ್ ಗೆ ವಿಮಾನ ಅಪ್ಪಳಿಸುವ ಬೆದರಿಕೆ ಹಾಕಿದ ಪೈಲಟ್
ಅಮೆರಿಕದ ಮಿಸ್ಸಿಸ್ಸಿಪ್ಪಿಯ ಟುಪೆಲೋದಲ್ಲಿರುವ ವಾಲ್ಮಾರ್ಟ್ ಸ್ಟೋರ್ ಗೆ ವಿಮಾನವನ್ನು ಉದ್ದೇಶಪೂರ್ವಕವಾಗಿ ಅಪ್ಪಳಿಸಿ ಪತನಗೊಳಿಸುವುದಾಗಿ ಪೈಲಟ್ ಒಬ್ಬರು ಬೆದರಿಕೆ ಹಾಕಿದ್ದಾರೆ.

ಟ್ಯುಪೆಲೊ: ಅಮೆರಿಕದ ಮಿಸ್ಸಿಸ್ಸಿಪ್ಪಿಯ ಟುಪೆಲೋದಲ್ಲಿರುವ ವಾಲ್ಮಾರ್ಟ್ ಸ್ಟೋರ್ ಗೆ ವಿಮಾನವನ್ನು ಉದ್ದೇಶಪೂರ್ವಕವಾಗಿ ಅಪ್ಪಳಿಸಿ ಪತನಗೊಳಿಸುವುದಾಗಿ ಪೈಲಟ್ ಒಬ್ಬರು ಬೆದರಿಕೆ ಹಾಕಿದ್ದಾರೆ.
ಟುಪೆಲೋ ಮೇಲೆ ಹಾರುತ್ತಿದ್ದ ವಿಮಾನವೊಂದರ ಪೈಲಟ್ ಮಿಸ್ಸಿಸ್ಸಿಪ್ಪಿಯಲ್ಲಿರುವ ವಾಲ್‌ಮಾರ್ಟ್ ಅಂಗಡಿಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿದ್ದ ವಾಲ್‌ಮಾರ್ಟ್ ಮತ್ತು ಇತರ ಅಂಗಡಿಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಪೈಲಟ್ ಜೊತೆ ನೇರವಾಗಿ ಮಾತನಾಡಲು ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಲ್ಲಾ ಸ್ಪಷ್ಟತೆ ನೀಡುವವರೆಗೆ ಆ ಪ್ರದೇಶವನ್ನು ತೊರೆಯುವಂತೆ ನಾಗರಿಕರಿಗೆ ಹೇಳಲಾಗಿದೆ. ವಿಮಾನದ ಚಲನೆಯು ಅಪಾಯದ ವಲಯವು ಟ್ಯುಪೆಲೋಗಿಂತಲೂ ದೊಡ್ಡದಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ವರದಿಯ ಪ್ರಕಾರ, ಟ್ಯುಪೆಲೋ ಮೇಲೆ ಪೈಲಟ್ ವಿಮಾನವನ್ನು ಹಾರಿಸುತ್ತಿರುವ ಬಗ್ಗೆ ಅಧಿಕಾರಿಗಳು ಮೊದಲು 5 ಗಂಟೆಗೆ(ಸ್ಥಳೀಯ ಕಾಲಮಾನ) ಎಚ್ಚರಿಸಿದರು. ವಿಮಾನವು ಬೆಳಗಿನ 5 ಗಂಟೆಗೆ ಸುತ್ತಲು ಪ್ರಾರಂಭಿಸಿ, ಮೂರು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿತ್ತು. ಪೈಲಟ್ 911 ಗೆ ಕರೆ ಮಾಡಿ ವೆಸ್ಟ್ ಮೇನ್‌ನಲ್ಲಿರುವ ವಾಲ್-ಮಾರ್ಟ್‌ಗೆ ಉದ್ದೇಶಪೂರ್ವಕವಾಗಿ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ತುರ್ತು ಸೇವೆಗಳನ್ನು ಅಲರ್ಟ್ ಮಾಡಲಾಗಿದೆ. ಪೈಲಟ್ ಟುಪೆಲೋ ವಿಮಾನ ನಿಲ್ದಾಣದಿಂದ ಸಣ್ಣ ವಿಮಾನವಾದ ಬೀಚ್‌ಕ್ರಾಫ್ಟ್ ಕಿಂಗ್ ಏರ್ 90 ಅನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಈ ವಿಮಾನವು ಒಂಬತ್ತು ಆಸನಗಳಾಗಿದ್ದು ಎರಡು ಎಂಜಿನ್‌ಗಳನ್ನು ಹೊಂದಿದೆ.
ರಾಜ್ಯ ಕಾನೂನು ಜಾರಿ ಮತ್ತು ತುರ್ತು ನಿರ್ವಾಹಕರು ಈ ಅಪಾಯಕಾರಿ ಪರಿಸ್ಥಿತಿಯನ್ನು ನಿಕಟವಾಗಿ ಟ್ರ್ಯಾಕ್ ಮಾಡುತ್ತಿದ್ದಾರೆ” ಎಂದು ಗವರ್ನರ್ ಟೇಟ್ ರೀವ್ಸ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


