ವಿದೇಶ

ಇರಾನ್ ನ ಪ್ರಮುಖ ಶಿಯಾ ಪವಿತ್ರ ಸ್ಥಳದ ಮೇಲೆ ದಾಳಿ, 15 ಸಾವು; ಹೊಣೆ ಹೊತ್ತ ಐಎಸ್!

ಇರಾನ್ ನ ಪ್ರಮುಖ ಶಿಯಾ ಪವಿತ್ರ ಸ್ಥಳದ ಮೇಲೆ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಇರಾನ್ ನ ಪ್ರಮುಖ ಶಿಯಾ ಪವಿತ್ರ ಸ್ಥಳದ ಮೇಲೆ ದಾಳಿ, 15 ಸಾವು; ಹೊಣೆ ಹೊತ್ತ ಐಎಸ್!
ಪ್ರಮುಖ ಶಿಯಾ ಪವಿತ್ರ ಸ್ಥಳ
Published On :

ಇರಾನ್: ಇರಾನ್ ನ ಪ್ರಮುಖ ಶಿಯಾ ಪವಿತ್ರ ಸ್ಥಳದ ಮೇಲೆ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 

ಸರ್ಕಾರಿ ಸ್ವಾಮ್ಯದ ಐಆರ್ ಎನ್ಎ ಈ ಬಗ್ಗೆ ವರದಿ ಪ್ರಕಟಿಸಿದ್ದು, 40ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಇರಾನ್ ನಲ್ಲಿ ಪೊಲೀಸ್ ವಶದಲ್ಲಿದ್ದ ಮಹಿಳೆ ಲಾಕ್ ಅಪ್ ಡೆತ್ ಆಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಚಳುವಳಿ 40 ದಿನಗಳನ್ನು ಪೂರೈಸಿದ್ದು ಈ ನಡುವೆಯೇ ಈ ದಾಳಿ ಸಹ ಸಂಭವಿಸಿದೆ.
ಘಟನೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ಅಲ್ಲಿನ ನ್ಯಾಯಾಂಗದ ಅಧಿಕೃತ ವೆಬ್ ಸೈಟ್ ನ ಮಾಹಿತಿಯ ಪ್ರಕಾರ,  ಇಬ್ಬರು ಗನ್ ಮ್ಯಾನ್ ಗಳು ಷಾ ಚೆರಾಗ್ ಎರಡನೇ ದೊಡ್ಡ ಪವಿತ್ರ ಸ್ಥಳದಲ್ಲಿರಲಿದ್ದಾರೆ. ಇತ್ತೀಚಿನ ಬೆಳಿಗ್ಗೆ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.