ವಿದೇಶ

ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಕೊಲೆ; ಕೊರಿಯಾದ ಕೊಠಡಿ ಸಹವಾಸಿ ವಶಕ್ಕೆ 

ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಹತ್ಯೆಯಾಗಿದ್ದು, ಆತನ ಕೊರಿಯನ್ ಕೊಠಡಿ ಸಹವಾಸಿಯನ್ನು ವಶಕ್ಕೆ ಪಡೆಯಲಾಗಿದೆ.

ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಕೊಲೆ; ಕೊರಿಯಾದ ಕೊಠಡಿ ಸಹವಾಸಿ ವಶಕ್ಕೆ 
ಸಾವು (ಸಾಂಕೇತಿಕ ಚಿತ್ರ)
Published On :

ವಾಷಿಂಗ್ ಟನ್: ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಹತ್ಯೆಯಾಗಿದ್ದು, ಆತನ ಕೊರಿಯನ್ ಕೊಠಡಿ ಸಹವಾಸಿಯನ್ನು ವಶಕ್ಕೆ ಪಡೆಯಲಾಗಿದೆ. 

ಪರ್ಡ್ಯೂ ವಿಶ್ವವಿದ್ಯಾಲಯದ ವರುಣ್ ಮನೀಷ್ ಚೆಡ್ಡಾ ಹತ್ಯೆಗೀಡಾಗಿರುವ ವಿದ್ಯಾರ್ಥಿಯಾಗಿದ್ದು ಕ್ಯಾಂಪಸ್ ನಲ್ಲಿ ಆತನ ಶವ ಪತ್ತೆಯಾಗಿದೆ. ಇದೇ ವಿವಿಯ ಮತ್ತೋರ್ವ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಆರೋಪದಡಿ ಬಂಧಿಸಲಾಗಿದ್ದು, ಎನ್ ಬಿಸಿ ನ್ಯೂಸ್ ಈ ಕುರಿತು ವರದಿ ಪ್ರಕಟಿಸಿದೆ.

ಜಿ-ಮಿನ್-ಜಿಮ್ಮಿ ಎಂಬ ವಿದ್ಯಾರ್ಥಿ ಕೊರಿಯಾ ಮೂಲದ ವಿದ್ಯಾರ್ಥಿ 911 ಕ್ಕೆ ಕರೆ ಮಾಡಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೆಯ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಅಧಿಕಾರಿಗಳ ಪ್ರಕಾರ, ಮೆಕ್‌ಕಟ್ಚಿಯಾನ್ ಹಾಲ್ ನಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾಗಿರುವ ಚೆಡ್ಡಾ ವಿವಿಯಲ್ಲಿ ಡೇಟಾ ಸೈನ್ಸ್ ಅಧ್ಯಯನ ಮಾಡುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.