ಐಎಸ್ಐಎಸ್ ನಾಯಕನ ಹತ್ಯೆ; ಉಗ್ರ ಸಂಘಟನೆಗೆ ಹೊಸ ಮುಖ್ಯಸ್ಥನ ನೇಮಕ
ಇಸ್ಲಾಮಿಕ್ ಸ್ಟೇಟ್ ಜಿಹಾದಿ ಉಗ್ರ ಸಂಘಟನೆಯ ನಾಯಕ ಅಬು ಹಸನ್ ಅಲ್ ಹಷ್ಮಿ ಅಲ್-ಕುರೇಷಿ ಯುದ್ಧವೊಂದರಲ್ಲಿ ಮೃತಪಟ್ಟಿದ್ದು, ಹೊಸ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ.

ಲೆಬೆನಾನ್: ಇಸ್ಲಾಮಿಕ್ ಸ್ಟೇಟ್ ಜಿಹಾದಿ ಉಗ್ರ ಸಂಘಟನೆಯ ನಾಯಕ ಅಬು ಹಸನ್ ಅಲ್ ಹಷ್ಮಿ ಅಲ್-ಕುರೇಷಿ ಯುದ್ಧವೊಂದರಲ್ಲಿ ಮೃತಪಟ್ಟಿದ್ದು, ಹೊಸ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ.
ಸ್ವತಃ ಉಗ್ರ ಸಂಘಟನೆ ಈ ಬಗ್ಗೆ ಮಾಹಿತಿ ನೀಡಿದ್ದು, ದೇವರ ಶತ್ರುಗಳೊಂದಿಗೆ ಹೋರಾಡಿ ನಮ್ಮ ನಾಯಕ ಮೃತಪಟ್ಟಿದ್ದಾನೆ ಎಂದಷ್ಟೇ ಉಗ್ರ ಸಂಘಟನೆಯ ವಕ್ತಾರರು ಹೇಳಿದ್ದಾರೆ.
ವಕ್ತಾರರ ಆಡಿಯೋ ಸಂದೇಶ ಬಿಡುಗಡೆಯಾಗಿದ್ದು, ಅಬು ಅಲ್ ಹುಸೇನ್ ಅಲ್ ಹುಸೇನಿ ಅಲ್ ಕುರೇಷಿಯನ್ನು ಹೊಸ ನಾಯಕನನ್ನಾಗಿ ನೇಮಕ ಮಾಡಲಾಗಿದೆ ಎಂದು ಉಗ್ರ ಸಂಘಟನೆ ತಿಳಿಸಿದೆ.
ಕುರಾಷಿ ಎಂಬುದು ಪ್ರವಾದಿ ಮೊಹಮ್ಮದ್ ರ ಬುಡಕಟ್ಟಿಗೆ ಸಂಬಂಧಿಸಿದ ಹೆಸರಾಗಿದ್ದು, ಈ ಮೂಲಕವೇ ಐಎಸ್ ನಾಯಕರುಗಳು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.
ಹೊಸ ನಾಯಕನ ಬಗ್ಗೆ ವಕ್ತಾರರು ಯಾವುದೇ ವಿವರಗಳನ್ನೂ ನೀಡಿಲ್ಲ. ಆದರೆ ಆತನೊಬ್ಬ ಹಿರಿಯ ಜಿಹಾದಿ ಎಂದಷ್ಟೇ ತಿಳಿಸಿದ್ದು, ಎಲ್ಲಾ ಸಂಘಟನೆಗಳು ಐಎಸ್ ಗೆ ತಮ್ಮ ನಿಷ್ಠೆಯನ್ನು ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


