ಶೂನ್ಯ ಕೋವಿಡ್ ನಿಲುವು ಘೋಷಿಸಿದ ಚೀನಾ: ಪ್ರತಿಭಟನೆ ಬಳಿಕ ನಿರ್ಬಂಧ ಸಡಿಲಿಕೆ!
ಚೀನಾ ಶೂನ್ಯ ಕೋವಿಡ್-19 ನಿಲುವನ್ನು ಘೋಷಿಸಿದ್ದು, ಕಠಿಣವಾಗಿ ಈ ನಿಲುವನ್ನು ಪಾಲಿಸುವುದಾಗಿ ಹೇಳಿದೆ. ಈ ನಡುವೆ ಚೀನಾದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

ಬೀಜಿಂಗ್: ಚೀನಾ ಶೂನ್ಯ ಕೋವಿಡ್-19 ನಿಲುವನ್ನು ಘೋಷಿಸಿದ್ದು, ಕಠಿಣವಾಗಿ ಈ ನಿಲುವನ್ನು ಪಾಲಿಸುವುದಾಗಿ ಹೇಳಿದೆ. ಈ ನಡುವೆ ಚೀನಾದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.
ಚೀನಾದಲ್ಲಿ ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ರಸ್ತೆಗಿಳಿದಿದ್ದ ಜನರು ಅಧ್ಯಕ್ಷ ಷಿ ಜಿನ್ಪಿಂಗ್ ರಾಜೀನಾಮೆಗೆ ಆಗ್ರಹಿಸಿದ್ದರು.
ಪ್ರತಿಭಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಚೀನಾ ಸರ್ಕಾರ, ಕೋವಿಡ್-19 ಸೋಂಕು ಪತ್ತೆಯಾದಲ್ಲಿ ಅಪಾರ್ಟ್ ಮೆಂಟ್ ಕಾಂಪೌಂಡ್ ಗೆ ಪ್ರವೇಶ ನಿರ್ಬಂಧಿಸಲು ಗೇಟ್ ಗಳನ್ನು ಸ್ಥಾಪಿಸುವುದಿಲ್ಲ ಎಂದು ಹೇಳಿದೆ.
ಇದೇ ವೇಳೆ ಸರ್ಕಾರ ಶೂನ್ಯ ಕೋವಿಡ್-19 ನಿಲುವನ್ನು ಕಠಿಣವಾಗಿ ಪಾಲಿಸುವುದಾಗಿ ಹೇಳಿದ್ದು, ಸೋಂಕಿಗೆ ತುತ್ತಾದ ಪ್ರತಿ ವ್ಯಕ್ತಿಯನ್ನೂ ಐಸೊಲೇಟ್ ಮಾಡುವುದಾಗಿ ಹೇಳಿದೆ. ಆದರೆ ಕೆಲವು ಪ್ರದೇಶಗಳಲ್ಲಿರುವ ಜನರು ತಮ್ಮನ್ನು ಹಲವು ತಿಂಗಳುಗಳಿಂದ ಮನೆಗಳಿಗೆ ಸೀಮಿತಗೊಳಿಸಲಾಗಿದ್ದು, ತಮಗೆ ಸಮರ್ಪಕ ಆಹಾರ ದೊರೆಯುತ್ತಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಭಾರತ ಹೊರತುಪಡಿಸಿ ಹಿಂದೂ ಮಹಾಸಾಗರದ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ!
ಕ್ವಾರಂಟೈನ್ ಹಾಗೂ ಇತರ ನಿಯಮಗಳನ್ನು ಬದಲಾವಣೆ ಮಾಡುವ ಮೂಲಕ "ಶೂನ್ಯ ಕೋವಿಡ್ ಅಡಚಣೆಯನ್ನು ಕಡಿಮೆ ಮಾಡುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದರು. ಆದರೆ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಿದ್ದರ ಪರಿಣಾಮ ಸಾರ್ವಜನಿಕರು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ನ.27 ರಂದು ಚೀನಾದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 40,347 ಕ್ಕೆ ಏರಿಕೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


