ಚೀನಾದಲ್ಲಿ ಲಾಕ್ ಡೌನ್: ಆಪಲ್ ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಪ್ರತಿಭಟನೆ
ಫಾಕ್ಸ್‌ಕಾನ್‌ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆದಿರುವ ಘಟನೆ ಚೀನಾದ ಝೆಂಗ್ಝೌ ನಲ್ಲಿ ವರದಿಯಾಗಿದೆ.

ಬೀಜಿಂಗ್: ಫಾಕ್ಸ್‌ಕಾನ್‌ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆದಿರುವ ಘಟನೆ ಚೀನಾದ ಝೆಂಗ್ಝೌ ನಲ್ಲಿ ವರದಿಯಾಗಿದೆ.
ವೈಬೋ ಮತ್ತು ಟ್ವಿಟರ್ ನಲ್ಲಿ ಪ್ರತಿಭಟನೆಯ ಚಿತ್ರಗಳು ವೈರಲ್ ಆಗತೊಡಗಿದ್ದು, ಬೀಜಿಂಗ್‌ನ ಪಟ್ಟುಬಿಡದ ಶೂನ್ಯ-ಕೋವಿಡ್ ನೀತಿಯಿಂದ ಕಾರ್ಖಾನೆಗಳಲ್ಲಿ ಹಾಗೂ ವಿವಿಗಳಲ್ಲೇ ಮಂದಿಯನ್ನು ಹಲವು ವಾರಗಳಿಂದ ಲಾಕ್ ಡೌನ್ ಮಾಡಿರುವುದರ ಪರಿಣಾಮ ಜನರಲ್ಲಿ ಅಸಹನೆ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಪರಿಣಾಮವಾಗಿ ಈ ಪ್ರತಿಭಟನೆ ನಡೆದಿದೆ.
ಹಗಲಿನ ವೇಳೆ ಈ ಕಾರ್ಖಾನೆಯ ಬಳಿ ಸಾವಿರಾರು ನೌಕರರು ನಡೆದು ಬರುತ್ತಿರುವುದು ಹಾಗೂ ಪೊಲೀಸರನ್ನು ಎದುರುಗೊಳ್ಳುತ್ತಿರುವುದು ವೀಡಿಯೋದಲ್ಲಿ ಬಹಿರಂಗವಾಗಿದೆ.
ಕಾರ್ಖಾನೆಯ ಪಕ್ಕದ ಅಪಾರ್ಟ್ ಮೆಂಟ್ ನ ವ್ಯಕ್ತಿಯೋರ್ವ ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. ಮತ್ತೊಂದು ವೀಡಿಯೋ ಕ್ಲಿಪ್ ನಲ್ಲಿ ಹಲವು ಮಂದಿ ಭದ್ರತಾ ಸಿಬ್ಬಂದಿಗಳು ಕಾರ್ಮಿಕರನ್ನು ಎಳೆದೊಯ್ಯುತ್ತಿರುವುದು ಕಂಡುಬಂದಿದ್ದು, ರಸ್ತೆಯ ಮೇಲೆ ಬಿದ್ದಿದ್ದ ಕಾರ್ಮಿಕರನ್ನು ಒದೆಯುತ್ತಿರುವ ದೃಶ್ಯಗಳು ದಾಖಲಾಗಿವೆ.
ಮತ್ತೊಂದು ಪ್ರತ್ಯೇಕ ನೇರ ಪ್ರಸಾರದ ವೀಡಿಯೋದಲ್ಲಿ ಹಲವು ನೌಕರರನ್ನು ಪೊಲೀಸರು ಹಿಡಿಯಲು ಆಗಮಿಸಿದಾಗ ನಮ್ಮ ಹಕ್ಕುಗಳನ್ನು ಕಾಪಾಡಿ ಎಂಬ ಘೋಷಣೆಗಳು ಕೇಳಿಬರುತ್ತಿವೆ. ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದ ಎಎಫ್ ಪಿಯ ಪ್ರಶ್ನೆಗಳಿಗೆ ಸಂಸ್ಥೆ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


