ಜಿ-20 ಶೃಂಗಸಭೆಯ ಭೋಜನದಲ್ಲಿ ಮೋದಿ-ಷಿ ಜಿನ್ಪಿಂಗ್ ಮುಖಾಮುಖಿ; ಹಸ್ತಲಾಘವ, ಲಘು ಸಂಭಾಷಣೆ
ಜಿ-20 ಶೃಂಗಸಭೆಯ ಭೋಜನದ ವೇಳೆ ಪ್ರಧಾನಿ ನರೇಂದ್ರ ಮೋದಿ- ಷಿ ಜಿನ್ಪಿಂಗ್ ಮುಖಾಮುಖಿಯಾಗಿದ್ದು, ಹಸ್ತಲಾಘವ ನೀಡಿದ್ದಾರೆ ಹಾಗೂ ಲಘು ಸಂಭಾಷಣೆಯಲ್ಲಿ ತೊಡಗಿದ್ದರು.

ಬಾಲಿ: ಜಿ-20 ಶೃಂಗಸಭೆಯ ಭೋಜನದ ವೇಳೆ ಪ್ರಧಾನಿ ನರೇಂದ್ರ ಮೋದಿ- ಷಿ ಜಿನ್ಪಿಂಗ್ ಮುಖಾಮುಖಿಯಾಗಿದ್ದು, ಹಸ್ತಲಾಘವ ನೀಡಿದ್ದಾರೆ ಹಾಗೂ ಲಘು ಸಂಭಾಷಣೆಯಲ್ಲಿ ತೊಡಗಿದ್ದರು.
2 ವರ್ಷಗಳ ಹಿಂದೆ ಭಾರತ-ಚೀನಾ ಗಡಿಯಲ್ಲಿ ಉಂಟಾಗಿದ್ದ ಸಂಘರ್ಷದಿಂದ ಉಭಯ ದೇಶಗಳ ಸಂಬಂಧ ಹದಗೆಟ್ಟ ಬಳಿಕ ಪ್ರಧಾನಿ ಮೋದಿ- ಷಿ ಜಿನ್ಪಿಂಗ್ ಮುಖಾಮುಖಿಯಾಗಿದ್ದಾರೆ.
ಜಿ-20 ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಿಗೆ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಆಯೋಜಿದ್ದ ಔತಣಕೂಟದಲ್ಲಿ ಇಬ್ಬರೂ ನಾಯಕರು ಭೇಟಿ ಮಾಡಿರುವ ವಿಡೀಯೋ ತುಣುಕು ಬಹಿರಂಗವಾಗಿದೆ.
ಜಿ-20 ಶೃಂಗಸಭೆಯಲ್ಲಿ ಉಭಯ ನಾಯಕರೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂಬ ಊಹಾಪೋಹಗಳಿದೆ. ಆದರೆ ಉಭಯ ದೇಶಗಳೂ ಈಗಾಗಲೇ ಬಿಡುಗಡೆ ಮಾಡಿರುವ ಅಜೆಂಡಾಗಳಲ್ಲಿ ಅಂತಹ ಯಾವುದೇ ಉಲ್ಲೇಖಗಳೂ ಇಲ್ಲ. 2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಉಂಟಾದ ಸಂಘರ್ಷದ ಬಳಿಕ ಭಾರತ-ಚೀನಾ ನಾಯಕರ ನಡುವೆ ಸಭೆಗಳು ನಡೆದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


