ಅರುಣಾಚಲ ಪ್ರದೇಶದಲ್ಲಿ ಇಬ್ಬರು ಯುವಕರ ನಾಪತ್ತೆ; ಚೀನಾದಿಂದ ಅಪಹರಣ ಶಂಕೆ
ಅರುಣಾಚಲ ಪ್ರದೇಶದಲ್ಲಿ ಇಬ್ಬರು ಯುವಕರು ಆ.24 ರಿಂದ ಭಾರತ-ಚೀನಾ ಗಡಿಯ ಪ್ರದೇಶದಿಂದ ನಾಪತ್ತೆಯಾಗಿದ್ದು ಚೀನಾದಿಂದ ಅಪಹರಣಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಇಬ್ಬರು ಯುವಕರು ಆ.24 ರಿಂದ ಭಾರತ-ಚೀನಾ ಗಡಿಯ ಪ್ರದೇಶದಿಂದ ನಾಪತ್ತೆಯಾಗಿದ್ದು ಚೀನಾದಿಂದ ಅಪಹರಣಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.
ಎರಡು ತಿಂಗಳಾದರೂ ಇಬ್ಬರು ಯುವಕರ ಪತ್ತೆಯಾಗಿಲ್ಲ. ಬ್ಯಾಟಿಲಂ ಟಿಕ್ರೊ (33) ವರ್ಷ ಹಾಗೂ ಬಾಯಿಂಗ್ಸೋ ಮನ್ಯು (35) ಆ.19 ರಂದು ಔಷಧೀಯ ಸಸ್ಯಗಳ ಶೋಧದಲ್ಲಿ ಮನೆಯಿಂದ ತೆರಳಿದ್ದರು, ಆತ ಆ.24 ರಂದು ಕೊನೆಯದಾಗಿ ಕೆಲವು ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದರು.
ಅರುಣಾಚಲ ಪ್ರದೇಶದಲ್ಲಿ ಸಾಮಾನ್ಯವಾಗಿ ಔಷಧೀಯ ಸಸ್ಯಗಳನ್ನು ಶೋಧಿಸುವವರು 15-20 ದಿನಗಳ ಕಾಲ ತಮಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಹೊತ್ತು ಹೋಗಿರುತ್ತಾರೆ. ಕುಟುಂಬ ಸದಸ್ಯರು ಅ.09 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದರು.
ನಾಪತ್ತೆಯಾಗಿರುವ ಯುವಕರ ಕುಟುಂಬ ಸದಸ್ಯರಿಗೆ ತಮ್ಮ ಯುವಕರು ಅಚಾನಕ್ ಆಗಿ ಚೀನಾ ಗಡಿ ದಾಟಿರಬಹುದು ತತ್ಪರಿಣಾಮ ಅವರು ಚೀನಾದಿಂದ ಅಪಹರಣಕ್ಕೆ ಒಳಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


