ಬ್ರಿಟನ್ ಪ್ರಧಾನಿ ಹುದ್ದೆಗೆ ಮತದಾನ: ಮತ್ತೆ ಅಗ್ರಸ್ಥಾನದಲ್ಲಿ ರಿಷಿ ಸುನಕ್
ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲರ ರಿಷಿ ಸುನಕ್ ಗದ್ದುಗೆಗೇರೋ ಕ್ಷಣಗಳು ಹತ್ತಿರವಾಗ್ತಿವೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಇತ್ತೀಚಿಗೆ ನಡೆದ ಸುತ್ತಿನಲ್ಲಿ ಗೆದ್ದಿದ್ದಾರೆ.

ಲಂಡನ್: ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲರ ರಿಷಿ ಸುನಕ್ ಗದ್ದುಗೆಗೇರೋ ಕ್ಷಣಗಳು ಹತ್ತಿರವಾಗ್ತಿವೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಇತ್ತೀಚಿಗೆ ನಡೆದ ಸುತ್ತಿನಲ್ಲಿ ಗೆದ್ದಿದ್ದಾರೆ.
ಶಾಸಕ ಕೆಮಿ ಬಡೆನೊಚ್ ಅವರು ಸ್ಪರ್ಧೆಯಿಂದ ಹೊರಗುಳಿದಿದ್ದು, ಇದೀಗ ಸ್ಪರ್ಧಿಯಲ್ಲಿ ಮೂವರು ಉಳಿದಿದ್ದಾರೆ.
ರಿಷಿ ಸುನಕ್ ನಾಲ್ಕನೇ ಸುತ್ತಿನ ಮತದಾನದಲ್ಲಿ ಅವರ ಪಕ್ಷದ ಸಹೋದ್ಯೋಗಿಗಳಿಂದ 118 ಮತಗಳನ್ನು ಪಡೆದರು. ಪಕ್ಷದ ಸಂಸದರಿಂದ 120 ಮತ ಗಳಿಸಿದ ಅಥವಾ ಕನ್ಸರ್ವೇಟಿವ್ ಪಕ್ಷದ ಸಂಸದರ ಮೂರನೇ ಒಂದು ಭಾಗದಷ್ಟು ಮತ ಪಡೆದವರು ಪ್ರಧಾನಿ ಹುದ್ದೆಗೇರಲಿದ್ದಾರೆ. ರೇಸ್‌ನಲ್ಲಿ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ರಿಷಿ ಸುನಕ್ ಖಚಿತಪಡಿಸಿದ್ದಾರೆ.
ರಿಷಿ ಸುನಕ್ ಸೋಮವಾರದ 115 ಮತಗಳಿಂದ ತಮ್ಮ ಮತದ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 92 ಮತಗಳನ್ನು ಪಡೆದರು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 86 ಮತಗಳನ್ನು ಪಡೆದರು.
ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


