ಚೀನಾದಲ್ಲಿ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಪ್ರಕರಣಗಳು ವರದಿ
ಕೋವಿಡ್ ಸೋಂಕಿನಿಂದ ಮತ್ತೆ ಚೀನಾ ತತ್ತರಿಸಿದ್ದು ಕೇವಲ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಬೀಜಿಂಗ್: ಕೋವಿಡ್ ಸೋಂಕಿನಿಂದ ಮತ್ತೆ ಚೀನಾ ತತ್ತರಿಸಿದ್ದು ಕೇವಲ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಚೀನಾದಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಸಡಿಲಗೊಳಿಸಿದ ಬೆನ್ನಲ್ಲೇ 20 ದಿನಗಳಲ್ಲಿ ಕೋವಿಡ್-19 ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಸಭೆಗೆ ಸಂಬಂಧಿಸಿದ ಡಾಕ್ಯುಮೆಂಟ್ ಸೋರಿಕೆಯಾಗಿದ್ದು, 248 ಮಿಲಿಯನ್ ಮಂದಿಗೆ ಅಥವಾ ಚೀನಾದ ಒಟ್ಟು ಜನಸಂಖ್ಯೆಯ ಶೇ.17.65 ರಷ್ಟು ಮಂದಿಗೆ ಡಿ.1 ರಿಂದ 20 ವರೆಗೆ ಕೋವಿಡ್-19 ಸೋಂಕು ತಗುಲಿದೆ.
ಚೀನಾ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್-19 ಪ್ರಕರಣಗಳ ಡೇಟಾಗಿಂತಲೂ ವಾಸ್ತವಾಂಶ ಬೇರೆಯದ್ದೇ ಇದ್ದು, ಕನಿಷ್ಟ 37 ಮಿಲಿಯನ್ ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ರೇಡಿಯೋ ಫ್ರೀ ಏಷ್ಯಾ ವರದಿ ಪ್ರಕಟಿಸಿದೆ.
ಚೀನಾ ಮೇನ್ ಲ್ಯಾಂಡ್ ನಲ್ಲಿ 3,761 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಹೊಸ ಸಾವು ವರದಿಯಾಗಿಲ್ಲ.
ಇನ್ನು ಚೀನಾದ ಪರಿಸ್ಥಿತಿಯ ಬಗ್ಗೆ ಬ್ರಿಟೀಷ್ ಮೂಲದ ಆರೋಗ್ಯ ಡೇಟಾ ಸಂಸ್ಥೆಯ ಪ್ರಕಾರ, ಚೀನಾದಲ್ಲಿ ದಿನವೊಂದಕ್ಕೆ ಒಂದು ಮಿಲಿಯನ್ ಸೋಂಕು ವರದಿಯಾಗಿ 5,000 ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


