ಗಡಿಯಲ್ಲಿ ನಡೆದ ಘಟನೆಗಳಿಂದ ಚೀನಾ-ಭಾರತದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ: ವಿದೇಶಾಂಗ ಸಚಿವ ಜೈಶಂಕರ್
ಗಡಿಯಲ್ಲಿ ನಡೆದ ಘಟನೆಗಳಿಂದಾಗಿ ಭಾರತ ಮತ್ತು ಚೀನಾದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಬ್ಯಾಂಕಾಕ್: ಗಡಿಯಲ್ಲಿ ನಡೆದ ಘಟನೆಗಳಿಂದಾಗಿ ಭಾರತ ಮತ್ತು ಚೀನಾದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ಚೀನಾ- ಭಾರತದ ಗಡಿ ಭಾಗದಲ್ಲಿ ಚೀನಾ ಮಾಡಿದ ಕೆಲಸಗಳಿಂದಾಗಿ ಈ ಪರಿಸ್ಥಿತಿ ಉಂಟಾಗಿದ್ದು, ಉಭಯ ದೇಶಗಳೂ ಕೈಜೋಡಿಸದೇ ಇದ್ದಲ್ಲಿ ಏಷ್ಯಾದ ಶತಮಾನವಾಗುವುದಿಲ್ಲ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕಾಕ್ ನ ಪ್ರತಿಷ್ಠಿತ ಚುಲಾಂಗ್‌ಕಾರ್ನ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ವೇಳೆ ಹಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಈ ಅಭಿಪ್ರಾಯವನ್ನು ಜೈಶಂಕರ್ ಹಂಚಿಕೊಂಡಿದ್ದಾರೆ.
"ಭಾರತ ಹಾಗೂ ಚೀನಾ ಒಟ್ಟಿಗೆ ಬಂದಾಗ ಏಷ್ಯಾದ ಶತಮಾನ ಘಟಿಸುತ್ತದೆ. ಇಲ್ಲದೇ ಇದ್ದಲ್ಲಿ ಆ ಕನಸು ನನಸಾಗುವುದು ಕಷ್ಟ" ಎಂದು ಜೈ ಶಂಕರ್ ಹೇಳಿದ್ದಾರೆ.
"ಚೀನಾ ಗಡೊಯಲ್ಲಿ ಮಾಡಿದ ಕೆಲಸಗಳಿಂದ ಈಗ ಭಾರತ-ಚೀನಾ ಸಂಬಂಧ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ, ಒಂದು ವೇಳೆ ಚೀನಾ-ಭಾರತ ಒಟ್ಟಿಗೆ ಬರುವುದಕ್ಕೆ ಕೇವಲ ಶ್ರೀಲಂಕಾ ಮಾತ್ರ ಅಲ್ಲ ಬಹಳಷ್ಟು ಕಾರಣಗಳಿವೆ" ಎಂದು ಜೈಶಂಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


