ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದ ಪೊಲೀಸಪ್ಪನ ಕಿವಿ, ಮೂಗು, ತುಟಿ ಕತ್ತರಿಸಿದ ವ್ಯಕ್ತಿ!
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪೊಲೀಸ್ ಪೇದೆಯೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವ್ಯಕ್ತಿ, ಕಾನ್‌ಸ್ಟೇಬಲ್ ನ ಮೂಗು, ಕಿವಿ ಮತ್ತು ತುಟಿಗಳನ್ನು...

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪೊಲೀಸ್ ಪೇದೆಯೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವ್ಯಕ್ತಿ, ಕಾನ್‌ಸ್ಟೇಬಲ್ ನ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯಲ್ಲಿ ಭಾನುವಾರ ಮುಹಮ್ಮದ್ ಇಫ್ತಿಕರ್ ಎಂಬ ಪ್ರಮುಖ ಆರೋಪಿ ತನ್ನ ಸಹಚರರೊಂದಿಗೆ ಸೇರಿ ಪೊಲೀಸಪ್ಪನ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿದ್ದಾರೆ. ಅಲ್ಲದೆ ಕಾನ್‌ಸ್ಟೇಬಲ್ ಖಾಸಿಂ ಹಯಾತ್ ಗೆ ತೀವ್ರ ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹಯಾತ್ ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಇಫ್ತಿಕರ್, 12 ಸಹಚರರೊಂದಿಗೆ ಸೇರಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಆತನನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ತೀವ್ರ ಚಿತ್ರಹಿಂಸೆ ನೀಡಿ ಆತನ ದೇಹದ ಭಾಗಗಳನ್ನು ಚೂಪಾದ ಆಯುಧ ದಿಂದ ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್‌ಸ್ಟೇಬಲ್ ನನ್ನು ಜಂಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಕಳೆದ ತಿಂಗಳು, ಪಾಕಿಸ್ತಾನ ದಂಡ ಸಂಹಿತೆಯ (ಪಿಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ), 384 (ಸುಲಿಗೆ) ಮತ್ತು 292 (ಅಶ್ಲೀಲತೆ) ಅಡಿಯಲ್ಲಿ ಕಾನ್‌ಸ್ಟೇಬಲ್ ಹಯಾತ್ ವಿರುದ್ಧ ಇಫ್ತಿಕರ್ ಪ್ರಕರಣ ದಾಖಲಿಸಿದ್ದರು.
ತನ್ನ ಪತ್ನಿ , ಹಯಾತ್ ನನ್ನು ಭೇಟಿಯಾದಾಗ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ್ದ ಮತ್ತು ಆತ ಕೃತ್ಯದ ವಿಡಿಯೋ ಮಾಡಿ ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ ಎಂದು ಇಫ್ತಿಕರ್ ಆರೋಪಿಸಿದ್ದರು.
ಇಫ್ತಿಕರ್ ಮತ್ತು ಆತನ ಸಹಚರರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


