ಭದ್ರತಾ ಮೈತ್ರಿಗೆ ಆಸ್ಟ್ರೇಲಿಯಾ, ಬ್ರಿಟನ್ ಜೊತೆಗೆ ಜಪಾನ್ ಅಥವಾ ಭಾರತ ಸೇರ್ಪಡೆಯನ್ನು ತಳ್ಳಿಹಾಕಿದ ಅಮೆರಿಕ
ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಮೆರಿಕ ತಳ್ಳಿಹಾಕಿದೆ.

ವಾಷಿಂಗ್ ಟನ್: ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಮೆರಿಕ ತಳ್ಳಿಹಾಕಿದೆ.
ಇಂಡೋ-ಪೆಸಿಫಿಕ್ ಪ್ರದೇಶದ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಆಸ್ಟ್ರೇಲಿಯಾ-ಬ್ರಿಟನ್-ಅಮೆರಿಕಾ ಒಳಗೊಂಡ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯನ್ನು ರಚಿಸಲಾಗಿದೆ.
ಸೆ.15 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜಂಟಿಯಾಗಿ ತ್ರಿಪಕ್ಷೀಯ ಭದ್ರತಾ ಮೈತ್ರಿ ಎಯುಕೆಯುಎಸ್ ರಚನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಅಣ್ವಸ್ತ್ರ ಸಾಮರ್ಥ್ಯದ ಸಬ್ ಮರೀನ್ ಗಳು ಲಭ್ಯವಾಗಲಿದೆ.
ಕಳೆದ ವಾರ ಎಯುಕೆಯುಎಸ್ ನ ಘೋಷಣೆ ಸೂಚನೆಯಾಗಿರಬೇಕೆಂದಿಲ್ಲ ಹಾಗೂ ಇಂಡೋ-ಪೆಸಿಫಿಕ್ ನ ಭದ್ರತೆಯ ವಿಷಯವಾಗಿ ಬೇರೆ ಯಾರೂ ಭಾಗಿಯಾಗಬಾರದು ಎಂಬ ಸಂದೇಶವನ್ನು ಫ್ರೆಂಚ್ ನ ಅಧ್ಯಕ್ಷರಿಗೂ ಅಮೆರಿಕ ಅಧ್ಯಕ್ಷರು ಕಳಿಸಿದ್ದಾರೆ ಎಂದು ಶ್ವೇತ ಭವನದ ಕಾರ್ಯದರ್ಶಿ ಜೆನ್ ಸಾಕಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಕ್ವಾಡ್ ಶೃಂಗಸಭೆಗಾಗಿ ಜಪಾನ್-ಭಾರತದ ನಾಯಕರು ವಾಷಿಂಗ್ ನಲ್ಲಿದ್ದು ಅವರನ್ನೂ ಹೊಸ ಭದ್ರತಾ ಮೈತ್ರಿಕೂಟದ ಭಾಗವಾಗಿಸುತ್ತೀರಾ? ಎಂಬ ಪ್ರಶ್ನೆಗೆ ಜೆನ್ ಸಾಕಿ ಉತ್ತರಿಸುತ್ತಿದ್ದರು. ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಕ್ವಾಡ್ ನ ಸದಸ್ಯ ರಾಷ್ಟ್ರಗಳಾಗಿವೆ. ಸೆ.24 ರಂದು ಜೋ ಬೈಡನ್ ಆಯೋಜಿಸಿರುವ ಕ್ವಾಡ್ ಸಭೆಯಲ್ಲಿ ಮೊದಲ ಬಾರಿಗೆ ದೇಶಗಳ ನಾಯಕರು ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ನಿಯಂತ್ರಿಸುವುದಕ್ಕೆ ಎಯುಕೆಯುಎಸ್ ಮೈತ್ರಿಕೂಟವನ್ನು ರಚನೆ ಮಾಡಿಕೊಳ್ಳಲಾಗಿದೆ. ಚೀನಾ ಎಯುಕೆಯುಎಸ್ ಮೈತ್ರಿಕೂಟವನ್ನು ತೀವ್ರ ಟೀಕೆ ಮಾಡಿದ್ದು ಈ ಗುಂಪಿಗೆ ದೀರ್ಘಾವಧಿ ಭವಿಷ್ಯವಿಲ್ಲ ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


