ವಿದೇಶ

ಕೈಲಾಗದ ಪ್ರಯಾಣಿಕರ ಸಮ್ಮುಖದಲ್ಲೇ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ: ಅಮೆರಿಕದಲ್ಲಿ ನಡೆದ ಮಾನಗೇಡಿ ಘಟನೆ

ತಮ್ಮ ಆಧುನಿಕ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಕಂಡು ಶಾಕ್ ಆಗುತ್ತಿದೆ ಎಂದು ಪೊಲೀಸರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೈಲಾಗದ ಪ್ರಯಾಣಿಕರ ಸಮ್ಮುಖದಲ್ಲೇ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ: ಅಮೆರಿಕದಲ್ಲಿ ನಡೆದ ಮಾನಗೇಡಿ ಘಟನೆ
ಸಾಂದರ್ಭಿಕ ಚಿತ್ರ
Published On :

ವಾಷಿಂಗ್ಟನ್: ಅಪರಿಚಿತನೋರ್ವ ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪ್ರಯಾಣಿಕಳೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಎಲ್ಲಕ್ಕಿಂತ ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ ಇತರೆ ಪ್ರಯಾಣಿಕರ ಸಮ್ಮುಖದಲ್ಲೇ ಅತ್ಯಾಚಾರ ನಡೆದಿದ್ದರೂ ಯಾರೊಬ್ಬರೂ ಮಹಿಳೆಯ ಸಹಾಯಕ್ಕೆ ಧಾವಿಸದೇ ಇದ್ದುದು. ಈ ಬಗ್ಗೆ ಪೊಲಿಸರು ಕೂಡಾ ಖೇದ ವ್ಯಕ್ತಪಡಿಸಿದ್ದು, ಯಾರಾದರೂ ಪ್ರಯಾಣಿಕರು ಇದನ್ನು ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಅಪ್ಪರ್ ಡರ್ಬಿ ಎನ್ನುವ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ವರದಿಯಾಗಿದೆ. ಅಸ್ವಸ್ಥ ಮಹಿಳೆಯೋರ್ವಳು ಪೆನ್ಸಿಲ್ವೇನಿಯ ರೈಲ್ವೇ ವಿಭಾಗದ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದಳು. ಆಕೆಯನ್ನು ವಿಚಾರಿಸಲಾಗಿ ಸಂಪೂರ್ಣ ಘಟನೆ ಬೆಳಕಿಗೆ ಬಂದಿದೆ. ರೈಲ್ವೇ ಪೊಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂಪೂರ್ಣ ಘಟನೆಯ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಅದರಲ್ಲಿ ಅಕ್ಕಪಕ್ಕದ ಜನರು ಅತ್ಯಾಚಾರ ನಡೆಯುತ್ತಿದ್ದರೂ ಸಹಾಯಕ್ಕೆ ಧಾವಿಸದೆ ತಮ್ಮ ಪಾಡಿಗೆ ತಾವಿರುವುದು ದಾಖಲಾಗಿದೆ. ಇದನ್ನು ಕಂಡು ರೈಲ್ವೇ ಪೊಲಿಸರು ಆಘಾತಗೊಂಡಿದ್ದಾರೆ. ತಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಕಂಡು ಶಾಕ್ ಆಗುತ್ತಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Article

ಪುರುಷರೇನು ರೋಬೋಟ್​ಗಳಲ್ಲ.. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದೇ ಅತ್ಯಾಚಾರ ಹೆಚ್ಚಲು ಕಾರಣ: ಇಮ್ರಾನ್ ಖಾನ್

ನವದೆಹಲಿ: ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ, ಏಮ್ಸ್ ಡಾಕ್ಟರ್ ವಿರುದ್ದ ಕೇಸ್ ದಾಖಲು

ಲಕ್ನೊ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆಕೋರರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಏಳು ಮಂದಿ ಬಂಧನ

ಶಾಲೆಗೆ ಹೋಗುತ್ತಿದ್ದ ಬಾಲಕಿ ಅಪಹರಣ; ಐದು ಜನರಿಂದ ಸಾಮೂಹಿಕ ಅತ್ಯಾಚಾರ, ಬಂಟ್ವಾಳ ಪೊಲೀಸರಿಂದ 'ಪೋಕ್ಸೊ' ಅಡಿ ಪ್ರಕರಣ ದಾಖಲು

ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ರದ್ಧುಗೊಳಿಸಿದ ಕರ್ನಾಟಕ ಹೈಕೋರ್ಟ್

ಅತ್ಯಾಚಾರಿಗಳ ಅಂಗಾಂಗ ಕತ್ತರಿಸುವ ಕಾನೂನನ್ನು ಭಾರತದಲ್ಲಿ ತರಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.