ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪ
ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಹೇಗೆ ಪ್ರಪಂಚದ ವಿನಾಶಕಾರಿ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುವುದನ್ನು ಹೊರಗೆಡವಿದ್ದಾರೆ.

ವಾಷಿಂಗ್ಟನ್: ಕಳೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತ ನಂತರ ಶ್ವೇತಭವನದ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ದನ್ನು ಜಗತ್ತು ಇನ್ನೂ ಮರೆತಿಲ್ಲ.
ಅಮೆರಿಕವನ್ನು ತಲೆತಗ್ಗಿಸುವಂತೆ ಮಾಡಿದ ಈ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ನೀಡಿತ್ತು ಎನ್ನುವ ಸಂಗತಿಯನ್ನು ಮಾಜಿ ಫೇಸ್ ಬುಕ್ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ.
ಫ್ರಾನ್ಸಸ್ ಹೋಗನ್ ಅವರು ಜನವರಿ 6ರಂದು ನಡೆದ ಕುಖ್ಯಾತ ಕ್ಯಾಪಿಟಲ್ ದಾಳಿ ಕುರಿತು ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ. ಅದೊಂದು ಘಟನೆಯ ಬಗ್ಗೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಹೇಗೆ ಪ್ರಪಂಚದ ವಿನಾಶಕಾರಿ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುವುದನ್ನು ಹೊರಗೆಡವಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ ಬುಕ್
ಜಗತ್ತಿಗೆ ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚಾಗಿ ದುಡ್ಡು ಮಾಡುವ ಬಗ್ಗೆ ಫೇಸ್ಬುಕ್ ಹೆಚ್ಚು ತಲೆ ಕೆಡಿಸಿಕೊಳ್ಳುತ್ತದೆ. ಇದರ ಫಲವಾಗಿಯೇ 2018ರಲ್ಲಿ 56 ಬಿಲಿಯನ್ ಡಾಲರ್ ನಷ್ಟಿದ್ದ ಆದಾಯ 119 ಬಿಲಿಯನ್ ಡಾಲರ್ ಗೆ ಏರಿಕೆಯಾಗಿರುವುದು.
ಇಂದು ಜನರ ಅಭಿಪ್ರಾಯಗಳನ್ನು ಬದಲಿಸಬಲ್ಲ ಶಕ್ತಿಯನ್ನು ಫೇಸ್ ಬುಕ್ ಹೊಂದಿದೆ. ಬಳಕೆದಾರರು ಮತ್ತೆ ಮತ್ತೆ ಫೇಸ್ ಬುಕ್ ಗೆ ಹಿಂದಿರುಗುವಂತೆ ಮಾಡುವುದು ಅದರ ಧ್ಯೇಯ. ಅದಕ್ಕಾಗಿ ಯಾವುದೇ ಹಂತಕ್ಕೂ ಅದು ಇಳಿಯಬಲ್ಲುದು. ಎರಡು ಪಂಗಡ ಸಮುದಾಯಗಳ ನಡುವೆ ಜಗಳವನ್ನೂ ತಂದಿಕ್ಕಬಲ್ಲುದು. ದ್ವೇಷ ಭಾವನೆ ಹರಡಬಲ್ಲುದು ಎಂದು ಹೋಗನ್ ಹೇಳಿದ್ದಾರೆ.
Related Article
ಫೇಸ್ಬುಕ್ ಪೋಸ್ಟ್ ಕುರಿತು ಉಡುಪಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ತನಿಖೆಗೆ ಎಸ್ಪಿ ಆದೇಶ
ನಕಲಿ ಫೇಸ್ ಬುಕ್ ಖಾತೆ ತೆರೆದು ಬಿಜೆಪಿ ವಿರುದ್ಧ ಪೋಸ್ಟ್: ಸಚಿವ ಸೋಮಶೇಖರ್ ಆಪ್ತ ಸಹಾಯಕನಿಂದ ದೂರು ದಾಖಲು
1 ತಿಂಗಳಲ್ಲಿ 30 ಮಿಲಿಯನ್ ಪೋಸ್ಟ್ ಗಳ ವಿರುದ್ಧ ಫೇಸ್ ಬುಕ್ ಕ್ರಮ: ಐಟಿ ಸಚಿವ ಖುಷ್; ಟ್ವಿಟರ್ ಮೇಲೆ ಹೆಚ್ಚಿದ ಒತ್ತಡ!
ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ 'ವಾಂಟೆಡ್ ಕ್ರಿಮಿನಲ್'..? ಹಿಡಿದುಕೊಟ್ಟರೆ 22 ಕೋಟಿ ರೂ.!
ಸಾಮಾಜಿಕ ಜಾಲತಾಣ ದುರ್ಬಳಕೆ: ಸಂಸದೀಯ ಸಮಿತಿ ಎದುರು ಫೇಸ್ ಬುಕ್ ಪ್ರತಿನಿಧಿಗಳು ಹಾಜರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


