ಅಮೆರಿಕ: H-1B ವೀಸಾದಾರರ ಪತ್ನಿಯರಿಗೆ ಉದ್ಯೋಗ ಪರವಾನಗಿ; ಬೈಡನ್ ಸರ್ಕಾರದ ಮಹತ್ವದ ನಿರ್ಧಾರ
H-1B ವೀಸಾ ಹೊಂದಿರುವವರಲ್ಲಿ ಬಹುತೇಕರು ಭಾರತೀಯ ಐಟಿ ಉದ್ಯೋಗಿಗಳಾಗಿದ್ದಾರೆ. ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ.

ವಾಷಿಂಗ್ಟನ್: ವಲಸೆ ನಿಯಮಗಳನ್ನು ಸಡಿಲಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಅಮೆರಿಕ H-1B ವೀಸಾದಾರರ ಪತ್ನಿಯರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅನುಮತಿ ನೀಡಿದೆ. ಅಮೆರಿಕದ ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ.
H-1B ವೀಸಾ ಹೊಂದಿರುವವರಲ್ಲಿ ಬಹುತೇಕರು ಭಾರತೀಯ ಐಟಿ ಉದ್ಯೋಗಿಗಳಾಗಿದ್ದಾರೆ. ವಿಶೇಷ ಪರಿಣತಿ ಪಡೆದಿರುವ ಕೌಶಲ್ಯಪೂರ್ಣ ವಿದೇಶಿ ಪ್ರಜೆಗಳು, ಪ್ರತಿಭಾನ್ವಿತರು ಅಮೆರಿಕದಲ್ಲಿ ನೌಕರಿ ಮಾಡಲು H-1B ವೀಸಾ ಅನುವು ಮಾಡಿಕೊಡುತ್ತದೆ.
ಅಮೆರಿಕದ ಐಟಿ ಕಂಪನಿಗಳು ಇದೇ ವೀಸಾವನ್ನು ನೆಚ್ಚಿಕೊಂಡಿದೆ. ಭಾರತದಿಂದ ಮತ್ತು ಚೀನಾದಿಂದ ತಮ್ಮ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಇದೇ ವೀಸಾ ಆಧಾರದ ಮೇಲೆ ಕರೆಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತವೆ.
ಹಾಗೆ ಅಮೆರಿಕಕ್ಕೆ ಬಂದ H-1B ವೀಸಾದಾರರ ಪತ್ನಿಯರು ಅಲ್ಲಿನ ನೆಲದಲ್ಲಿ ಕೆಲಸ ಮಾಡಲು ಪರವಾನಗಿ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿತ್ತು. ಇದೀಗ H-1B ವೀಸಾದಾರ ಪತ್ನಿಯರಿಗೆ ಈ ಪರವಾನಗಿ ನೇರವಾಗಿಯೇ ದೊರೆಯಲಿದೆ.
ಇದನ್ನೂ ಓದಿ: ನಕಲಿ ಪಾಸ್ಪೋರ್ಟ್, ವೀಸಾ ಬಳಸಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎಟಿಎಸ್
Related Article
ಭಾರತದ ನೇತೃತ್ವವನ್ನು ಹಿಂಬಾಲಿಸಿದ ಅಮೆರಿಕ!: ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ ಸೇರ್ಪಡೆ
ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಮತ್ತೆ ಹೊರಹೊಮ್ಮಿದ ಮೋದಿ: ಅಮೆರಿಕ ಸಂಸ್ಥೆ ಸಮೀಕ್ಷೆಯಲ್ಲಿ ಸಾಬೀತು
ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಪಿತ್ತಕೋಶ ಕ್ಯಾನ್ಸರ್ ಗೆ ಮನೆಮದ್ದು ಗಣಿಕೆ ಸೊಪ್ಪು: ಸಂಶೋಧನೆಗೆ ಅಮೆರಿಕದ ಎಫ್ ಡಿಎ ಅನುಮೋದನೆ
ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'
ಜಾರ್ಜಿಯಾದಲ್ಲಿ ಅಧಿಕೃತವಾಗಿ ನವೆಂಬರ್ 1 ರಾಜ್ಯೋತ್ಸವ ದಿನ ಆಚರಣೆ: ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


