ಕೊರೋನಾ ಭೀತಿ: 10 ದಿನಗಳ ಬಳಿಕ ಮತ್ತೆ ಒಳಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ಇಸ್ರೇಲ್
ಕೊರೋನಾ ಮತ್ತೆ ಉಲ್ಪಣಿಸುತ್ತಿರುವುದರಿಂದ ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಇಸ್ರೇಲ್ ಆರೋಗ್ಯ ಸಚಿವಾಲಯ ಆದೇಶಿಸಿದೆ.

ಜೆರುಸಲೆಮ್: ಕೊರೋನಾ ಮತ್ತೆ ಉಲ್ಪಣಿಸುತ್ತಿರುವುದರಿಂದ ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಇಸ್ರೇಲ್ ಆರೋಗ್ಯ ಸಚಿವಾಲಯ ಆದೇಶಿಸಿದೆ.
ಇಸ್ರೇಲ್ ನಲ್ಲಿ ಕೊರೋನಾ ಕಡಿಮೆಯಾಗಿದ್ದರಿಂದ 10 ದಿನಗಳ ಹಿಂದೆ ಒಳಾಂಗಣ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಿತ್ತು. ಲಸಿಕೆ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಇಸ್ರೇಲ್ ಗೆ ದೊಡ್ಡ ಹೊಡೆತ ಬಿದ್ದಿದೆ.
ಇಸ್ರೇಲ್ ನ ಸಾಂಕ್ರಾಮಿಕ ಪ್ರಕ್ರಿಯೆ ಕಾರ್ಯಪಡೆಯ ಮುಖ್ಯಸ್ಥ ನಾಚ್ಮನ್ ಆಶ್ ಸಾರ್ವಜನಿಕ ರೇಡಿಯೊಗೆ ತಿಳಿಸಿದ್ದು, ದಿನಕ್ಕೆ 100ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿದ್ದು ನಾಲ್ಕು ದಿನಗಳ ನಂತರ ಕಳೆದ ಒಂದು ದಿನದಲ್ಲಿ 227 ಪ್ರಕರಣಗಳು ಪತ್ತೆಯಾಗಿವೆ. ನಾವು ಪ್ರತಿ ಕೆಲವು ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಐಶ್ ಹೇಳಿದರು.
ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಿದ್ದು ಇಸ್ರೇಲ್ ಗೆ ಹಿನ್ನಡೆಯಾಗಿದೆ. ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನದ ಹಿನ್ನಲೆಯಲ್ಲಿ ಜೂನ್ 15ರಂದು ತೆಗೆದುಹಾಕಿದ್ದ ಮಾಸ್ಕ್ ಧರಿಸುವ ನಿಯಮವನ್ನು ಮತ್ತೆ ಆರಂಭಿಸಲಿದ್ದೇವೆ ಎಂದರು.
ಇಸ್ರೇಲ್ ನಲ್ಲಿ ಸುಮಾರು 5.2 ಮಿಲಿಯನ್ ಜನರು ಫಿಜರ್-ಬಯೋಟೆಕ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


