ಉತ್ತರ ಕೊರಿಯಾ ಜನರು ಇನ್ನೂ 10 ದಿನ ನಗುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ! ಏಕೆ ಗೊತ್ತಾ?
ಉತ್ತರ ಕೊರಿಯಾ: ಉತ್ತರ ಕೊರಿಯಾ ತನ್ನ ವಿಚಿತ್ರ ಕಾನೂನುಗಳು ಮತ್ತು ನಿರ್ಧಾರಗಳಿಗೆ ವಿಶ್ವದಾದ್ಯಂತ ಪ್ರಸಿದ್ಧಿಯಾಗಿದ್ದು, ಇದೀಗ ಇಲ್ಲಿನ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಸಾರ್ವಜನಿಕರ ನಗುವನ್ನು ನಿಷೇಧಿಸಿದ್ದಾರೆ.

ಪ್ಯೊನ್ಗ್ಯಾಂಗ್: ಉತ್ತರ ಕೊರಿಯಾ ತನ್ನ ವಿಚಿತ್ರ ಕಾನೂನುಗಳು ಮತ್ತು ನಿರ್ಧಾರಗಳಿಗೆ ವಿಶ್ವದಾದ್ಯಂತ ಪ್ರಸಿದ್ಧಿಯಾಗಿದ್ದು, ಇದೀಗ ಇಲ್ಲಿನ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಸಾರ್ವಜನಿಕರ ನಗುವನ್ನು ನಿಷೇಧಿಸಿದ್ದಾರೆ.
ಉತ್ತರ ಕೊರಿಯಾ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯಸ್ಮರಣೆ ಪ್ರಯುಕ್ತ ಮುಂದಿನ 10 ದಿನಗಳ ಕಾಲ ಉತ್ತರ ಕೊರಿಯಾ ನಾಗರಿಕರು ಶೋಕಿಸಬೇಕಾಗಿದೆ. ಈ ಸಮಯದಲ್ಲಿ ಸಂತೋಷವಾಗಿರಲು ಅಥವಾ ನಗಲು ಸಾಧ್ಯವಿಲ್ಲ. ಯಾರಾದರೂ ಮದ್ಯಪಾನ ಮಾಡುತ್ತಿರುವುದು ಕಂಡುಬಂದರೆ ಅವರಿಗೆ ನೇರವಾಗಿ ಮರಣದಂಡನೆ ವಿಧಿಸುವುದಾಗಿ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಪ್ರಕಟಿಸಿದ್ದಾರೆ.
ಡೈಲಿಮೇಲ್ ಸುದ್ದಿ ಪ್ರಕಾರ, ಕಿಮ್ ಜಾಂಗ್ ಇಲ್ 1994 ರಿಂದ 2011ರವರೆಗೆ ಉತ್ತರ ಕೊರಿಯಾವನ್ನು ಆಳಿ 2021ರಲ್ಲಿ ನಿಧನರಾದರು. ಇಲ್ ನಂತರ ಅವರ ಮೂರನೇ ಮತ್ತು ಕಿರಿಯ ಮಗ ಕಿಮ್ ಜಾಂಗ್ ಉನ್ ದೇಶದ ಉಸ್ತುವಾರಿ ವಹಿಸಿಕೊಂಡಿದ್ದು, ಇದೀಗ ಕಿಮ್ ಜಾಂಗ್ ಇಲ್ ನಿಧನಕ್ಕೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಜನರಿಗೆ 10 ದಿನಗಳ ಕಟ್ಟುನಿಟ್ಟಾದ ಶೋಕಾಚರಣೆಯನ್ನು ಆಚರಿಸಲು ಆದೇಶಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


