ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಹೆರಾತ್ ನಲ್ಲಿ ರಾಜ್ಯಪಾಲ, ಪೊಲೀಸರ ಸಮೇತ ಎಲ್ಲ ಸರ್ಕಾರಿ ಅಧಿಕಾರಿಗಳ ಶರಣಾಗತಿ
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಆಫ್ಗಾನಿಸ್ತಾನದ ಹೆರಾತ್ ನಲ್ಲಿ ಸರ್ಕಾರಿ ಅಧಿಕಾರಿಗಳೇ ಉಗ್ರರಿಗೆ ಶರಣಾಗಿದ್ದಾರೆ.

ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಆಫ್ಗಾನಿಸ್ತಾನದ ಹೆರಾತ್ ನಲ್ಲಿ ಸರ್ಕಾರಿ ಅಧಿಕಾರಿಗಳೇ ಉಗ್ರರಿಗೆ ಶರಣಾಗಿದ್ದಾರೆ.
ಈ ಕುರಿತಂತೆ ಆಫ್ಘಾನಿಸ್ತಾನದ ಟೋಲೋ ನ್ಯೂಸ್ ವರದಿ ಮಾಡಿದ್ದು, ಹೆರಾತ್ ಪ್ರಾಂತ್ಯದ ಸರ್ಕಾರಿ ಅಧಿಕಾರಿಗಳು, ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಮಾಜಿ ಮುಜಾಹಿದ್ದೀನ್ ನಾಯಕ ಮೊಹಮ್ಮದ್ ಇಸ್ಮಾಯಿಲ್ ಖಾನ್, ಆಂತರಿಕ ಭದ್ರತೆಯ ಉಪ ಮಂತ್ರಿ ಮತ್ತು 207 ಜಾಫರ್ ಕಾರ್ಪ್ಸ್ ಕಮಾಂಡರ್ ಗಳು ತಾಲಿಬಾಗ್ ಉಗ್ರರಿಗೆ ಶರಣಾಗಿದ್ದಾರೆ.
ನಿನ್ನೆಯಷ್ಟೇ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಆ ಮೂಲಕ ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳ ಪೈಕಿ 11 ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಂತಾಗಿದೆ.
ಈ ಹಿಂದೆ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸರ್ಕಾರ ತನ್ನ ಕೊನೆಯ ಸೈನಿಕ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳು ಮತ್ತೆ ಅಟ್ಟಹಾಸ ಆರಂಭಿಸಿ ಕೇವಲ 15 ದಿನಗಳ ಅಂತರದಲ್ಲಿ ತಾವು ಈ ಹಿಂದೆ ಹಿಡಿತ ಕಳೆದುಕೊಂಡಿದ್ದ ಪ್ರದೇಶಗಳ ಪೈಕಿ ಶೇ.50ರಷ್ಟಕ್ಕೂ ಹೆಚ್ಚು ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದೆ.
Related Article
ಅಫ್ಘಾನಿಸ್ತಾನದ 2ನೇ ಅತಿದೊಡ್ಡ ನಗರ ಕಂದಹಾರ್, ಲಷ್ಕರ್ ಗಹ್ ತಾಲಿಬಾನ್ ವಶಕ್ಕೆ!
90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶಕ್ಕೆ: ಅಮೆರಿಕ ಗುಪ್ತಚರ ಸಂಸ್ಥೆ ಭವಿಷ್ಯ
ತಾಲಿಬಾನ್ ಆಕ್ರಮಣಕ್ಕೆ ಬೆದರಿ ಆಫ್ಘನ್ ಹಂಗಾಮಿ ವಿತ್ತ ಸಚಿವ ಪಲಾಯನ!
ತಾಲಿಬಾನ್ ಹಿಂಸಾಚಾರ: ಅಫ್ಘಾನಿಸ್ತಾನದಲ್ಲಿರುವ ದೂತವಾಸ ಸಿಬ್ಬಂದಿ ವಾಪಸ್ ಕರೆಸಿಕೊಳ್ಳಲು ಭಾರತ ಕ್ರಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


