ವಿದೇಶ

ರಷ್ಯಾ ಸಂಸತ್ ಚುನಾವಣೆ: ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪಕ್ಷ ಮತ್ತೆ ಅಧಿಕಾರಕ್ಕೇರುವುದು ನಿಚ್ಚಳ: ಚುನಾವಣೆಗೂ ಮುನ್ನ ವಿರೋಧಿಗಳನ್ನು ಬೇಟೆಯಾಡಿದ ಪುತಿನ್

ಕಳೆದ 9 ವರ್ಷಗಳಿಂದ ರಷ್ಯಾ ಅಧ್ಯಕ್ಷ ಗಾದಿಯಲ್ಲಿರುವ ಪುತಿನ್ ಮತದಾನ ನಡೆಯುವುದಕ್ಕೂ ಮುನ್ನ ತನ್ನ ವಿರೋಧಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಅನೇಕರು ಪುತಿನ್ ಪ್ರತೀಕಾರಕ್ಕೆ ಬೆದರಿ ದೇಶದಿಂದ ಪಲಾಯನಗೈದವರೂ ಇದ್ದಾರೆ.

ರಷ್ಯಾ ಸಂಸತ್ ಚುನಾವಣೆ: ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪಕ್ಷ ಮತ್ತೆ ಅಧಿಕಾರಕ್ಕೇರುವುದು ನಿಚ್ಚಳ: ಚುನಾವಣೆಗೂ ಮುನ್ನ ವಿರೋಧಿಗಳನ್ನು ಬೇಟೆಯಾಡಿದ ಪುತಿನ್
ರಷ್ಯಾ ಅಧ್ಯಕ್ಷ ಪುತಿನ್
Published On :

ಮಾಸ್ಕೊ: ಕಳೆದ ಮೂರು ದಿನಗಳಿಂದ ನಡೆದ ಮತದಾನದ ನಂತರ ರಷ್ಯಾ ಅಧ್ಯಕ್ಷ ಪುತಿನ್ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಏರುವುದು ನಿಚ್ಚಳವಾಗಿದೆ. ಭಾನುವಾರ ರಾತ್ರಿ 8 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.

ಪುತಿನ್ ಅವರ ರಾಜಕೀಯ ಎದುರಾಳಿಯಾಗಿದ್ದ ಅಲೆಕ್ಸಿ ನವಾಲ್ನಿಯವರನ್ನು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿಗಟ್ಟಲಾಗಿತ್ತು. ಅಲ್ಲದೆ ನವಾಲ್ನಿ ಅವರ ಸಂಘಟನೆಗಳು, ರಾಜಕೀಯ ಕಚೇರಿಗಳನ್ನು ಪುತಿನ್ ಸರ್ಕಾರ ತೀವ್ರವಾದಿ ಆರೋಪದ ಮೇಲೆ ಮುಚ್ಚಿಸಿತ್ತು. ನವಾಲ್ನಿ ಪರ ಪ್ರತಿಭಟನೆ ಮಾಡುವವರನ್ನು ತೀವ್ರಗಾಮಿಗಳೆಂದು ಬಂಧಿಸಿತ್ತು.

ಮತದಾನ ನಡೆಯುವುದಕ್ಕೂ ಮುನ್ನ ದೇಶದಲ್ಲಿ ಉಳಿದಿದ್ದ ತನ್ನ ವಿರೋಧಿಗಳನ್ನು ಪುತಿನ್ ಬಂಧಿಸಿ ಜೈಲಿಗಟ್ಟಿದ್ದರು, ಅವರಲ್ಲಿ ಅನೇಕರು ಪುತಿನ್ ಪ್ರತೀಕಾರಕ್ಕೆ ಬೆದರಿ ದೇಶದಿಂದ ಪಲಾಯನಗೈದವರೂ ಇದ್ದಾರೆ. ಈ ನಡುವೆ ಪುತಿನ್ ಚುನಾವಣಾ ಅಕ್ರಮ ಎಸಗಿದ್ದಾರೆ ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. 

ವಿರೋಧ ಪಕ್ಷದ ಬೆಂಬಲಿಗರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವುದು ಸೇರಿದಂತೆ ಹಲವು ಅನಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Related Article

2021ರ ಅಂತ್ಯದ ವೇಳೆ ಭಾರತಕ್ಕೆ ಎಸ್-400 ಕ್ಷಿಪಣಿ ವ್ಯವಸ್ಥೆ ರವಾನೆ ಆರಂಭ: ರಷ್ಯಾ

ತಾಲೀಬಾನ್ ಆಡಳಿತದಲ್ಲಿ ಆಫ್ಘಾನಿಸ್ತಾನದ ಪರಿಸ್ಥಿತಿ ಘನಿ ಸರ್ಕಾರದ್ದಕ್ಕಿಂತ ಉತ್ತಮವಾಗಿದೆ: ರಷ್ಯಾ

ರಷ್ಯಾದ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಪರಮಾಣು, ಬಾಹ್ಯಾಕಾಶ ಮತ್ತು ರಕ್ಷಣಾ ಸಹಕಾರದ ಕುರಿತು ಚರ್ಚೆ!

ನಾಪತ್ತೆಯಾಗಿದ್ದ ರಷ್ಯಾ ವಿಮಾನ ಎಎನ್-26 ಸಮುದ್ರಕ್ಕೆ ಬಿದ್ದು ಪತನ, 28 ಮಂದಿ ನಾಪತ್ತೆ

ರಷ್ಯಾದ ಸ್ಪುಟ್ನಿಕ್ ವಿ ಫಿಲ್ಲಿಂಗ್ ಘಟಕದ ದತ್ತಾಂಶ ಗುಣಮಟ್ಟದ ನಿಯಂತ್ರಣದ ಬಗ್ಗೆ ಕಳವಳವಿದೆ: ಡಬ್ಲ್ಯುಎಚ್‌ಒ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.