ಮಹಿಳಾ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿ, ಕುಟುಂಬ ಸದಸ್ಯರನ್ನು ಅಪಹರಿಸಿದ ತಾಲಿಬಾನ್
ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಶಸ್ತ್ರ ಸಜ್ಜಿತ ತಾಲಿಬಾನ್ ಗುಂಪು ಶನಿವಾರ ಮಹಿಳಾ ಸಾಮಾಜಿಕ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕುಟುಂಬದ ಐವರು ಸದಸ್ಯರನ್ನು ಅಪಹರಿಸಿದೆ.

ಕಾಬೂಲ್: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಶಸ್ತ್ರ ಸಜ್ಜಿತ ತಾಲಿಬಾನ್ ಗುಂಪು ಶನಿವಾರ ಮಹಿಳಾ ಸಾಮಾಜಿಕ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕುಟುಂಬದ ಐವರು ಸದಸ್ಯರನ್ನು ಅಪಹರಿಸಿದೆ.
ಅಫ್ಘಾನಿಸ್ತಾನ ಜಿಲ್ಲೆಯ 15ನೇ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹತ್ತಾರು ಶಸ್ತ್ರ ಸಜ್ಜಿತ ತಾಲಿಬಾನ್ ಸಂಘಟನೆ ಸದಸ್ಯರು, ಅಕ್ರಮವಾಗಿ ಫಾಹಿಮಾ ರಹಮತಿಯ ಮನಗೆ ನುಗ್ಗಿದ್ದು, ಆಕೆ ಮೇಲೆ ಹಲ್ಲೆ ನಡೆಸಿರುವುದಾಗಿ ಪಜ್ವಾಕ್ ಅಫ್ಘಾನ್ ನ್ಯೂಸ್ ವರದಿ ಮಾಡಿದೆ.
ರಹಮತಿ ಹೋಫ್ ಫೌಂಡೇಶನ್ ಮುಖ್ಯಸ್ಥರಾಗಿದ್ದು, ತನ್ನಿಬ್ಬರು ಸಹೋದರರು, ಅಳಿಯ ಹಾಗೂ ಒಬ್ಬರು ನೆರಮನೆಯವರು ಸೇರಿದಂತೆ ಐವರು ಪುರುಷರನ್ನು ತಾಲಿಬಾನ್ ಅಪಹರಣ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಈ ಮಧ್ಯೆ ರಹಮತಿಯ ಮನೆಯಲ್ಲಿ ಮಾಜಿ ರಾಷ್ಟ್ರೀಯ ನಿರ್ದೇಶನಾಲಯದ ಭದ್ರತಾ ಕಾರ್ಯಕರ್ತರು ಇದ್ದ ಬಗ್ಗೆ ತಾಲಿಬಾನ್ ಗೆ ಮಾಹಿತಿ ಬಂದಿತ್ತು ಎಂದು ಕಂದಹಾರ್ ಗುಪ್ತಚರ ಮುಖ್ಯಸ್ಥ ರಹಮತುಲ್ಲಾ ನಾರೈವಾಲ್ ಆರೋಪಿಸಿರುವುದಾಗಿ ಪಜ್ವಾಕ್ ಅಫ್ಘಾನ್ ನ್ಯೂಸ್ ವರದಿ ಮಾಡಿದೆ.
ಆದರೆ, ಇಂತಹ ಆರೋಪಗಳನ್ನು ಮಹಿಳಾ ಹೋರಾಟಗಾರ್ತಿ ಅಲ್ಲಗಳೆದಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಹಿಡಿತವನ್ನು ಸಾಧಿಸಿದ ಮೇಲೆ ದೇಶಾದ್ಯಂತ ಮಹಿಳೆಯರ ಮೇಲಿನ ಕಿರುಕುಳ, ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ತಾಲಿಬಾನ್ ನಿಂದ ಬೆದರಿಕೆಯ ಹೊರತಾಗಿಯೂ ಅನೇಕ ಮಹಿಳೆಯರು ದೇಶದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


