ಬಡ ದೇಶಗಳಿಗೆ ಹೆಚ್ಚಿನ ಕೋವಿಡ್ ಲಸಿಕೆ ಪೂರೈಕೆ ಕರೆಯೊಂದಿಗೆ ಜಿ-20 ಶೃಂಗಸಭೆ ಆರಂಭ
ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರು ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡುವ ಮೂಲಕ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಸಮ್ಮೇಳನ ಜಿ-20 ಶೃಂಗಸಭೆಗೆ ಚಾಲನೆ...

ರೋಮ್: ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರು ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡುವ ಮೂಲಕ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಸಮ್ಮೇಳನ ಜಿ-20 ಶೃಂಗಸಭೆಗೆ ಚಾಲನೆ ನೀಡಿದರು.
ಜಾಗತಿಕವಾಗಿ ಕೋವಿಡ್ ಲಸಿಕೆ ಅಂತರ "ನೈತಿಕವಾಗಿ ಸ್ವೀಕಾರಾರ್ಹವಲ್ಲ" ಎಂದಿರುವ ಡ್ರಾಗಿ ಅವರು, ವಿಶ್ವದ ಬಡ ದೇಶಗಳಲ್ಲಿ ಕೇವಲ ಶೇ. 3 ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಶ್ರೀಮಂತ ರಾಷ್ಟ್ರಗಳಲ್ಲಿ ಶೇ. 70 ಜನ ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಕಡಿಮೆ-ಆದಾಯದ ದೇಶಗಳಿಗೆ ಹೆಚ್ಚಿನ ಲಸಿಕೆ ಪೂರೈಸಲು ಸಾಮೂಹಿಕ ಸಹಾಯಕ್ಕಾಗಿ ಶೃಂಗಸಭೆಯ ಮೂಲಕ ಡ್ರಾಗಿ ಕರೆ ನೀಡಿದರು. ಡ್ರಾಗಿ ಅವರು ರೋಮ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ- 20 ಶೃಂಗಸಭೆಯ ಆತಿಥ್ಯ ವಹಿಸಿದ್ದಾರೆ.
ಇಂದಿನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಜಾಗತಿಕ ಕನಿಷ್ಠ ಕಾರ್ಪೋರೇಟ್ ತೆರಿಗೆ ದರ, ಕೊವಿಡ್ 19 ಸಾಂಕ್ರಾಮಿಕದಿಂದ ಆರೋಗ್ಯದಲ್ಲಿ ಚೇತರಿಕೆ, ಜಾಗತಿಕ ಅಭಿವೃದ್ಧಿ ಇತ್ಯಾದಿ ವಿಚಾರಗಳನ್ನು ಇಂದು ನಾಯಕರು ವ್ಯಾಪಕವಾಗಿ ಚರ್ಚಿಸಲಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಜಿ-20 ನಾಯಕರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಜಾಗತಿಕ ಒಳಿತಿಗಾಗಿ ಇರುವ ಅತಿಮುಖ್ಯವಾದ ವೇದಿಕೆಯಾದ ಜಿ-20 ಸಂಘಟನೆಯ ನಾಯಕರು ಇಂದು ರೋಮ್‌ನಲ್ಲಿ ಭೇಟಿಯಾದರು ಎಂದು ಹೇಳಿದೆ. ಈ ಫೋಟೋದಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪಿಎಂ ಬೋರಿಸ್ ಜಾನ್ಸನ್ ಇತರ ಪ್ರಮುಖ ನಾಯಕರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


