ವಿದೇಶ

ಅಮೆರಿಕಾದಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚರಣೆ

ಅಮೆರಿಕದಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಅಮೆರಿಕಾದಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚರಣೆ
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ
Published On :

ವಾಷಿಂಗ್ ಟನ್: ಅಮೆರಿಕದಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚರಣೆ ಮಾಡಲಾಗುತ್ತಿದೆ. 

ಅಮೆರಿಕದ 50 ರಾಜ್ಯಗಳ ಪೈಕಿ 20 ರಾಜ್ಯಗಳಲ್ಲಿ ಹಾಗೂ 40 ಕ್ಕೂ ಹೆಚ್ಚು ನಗರಗಳಲ್ಲಿ ಈ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ ಎಂದು ಸಮುದಾಯದ ನಾಯಕರು ತಿಳಿಸಿದ್ದಾರೆ. 

ಈ ನಿಟ್ಟಿನಲ್ಲಿ ಹಿಂದೂ ಸಂಘಟನೆಗಳ ಮೊದಲ ಹೆಜ್ಜೆಯನ್ನು ಚುನಾಯಿತ ಪ್ರತಿನಿಧಿಗಳು ಸ್ವಾಗತಿಸಿದ್ದು, ಅಮೆರಿಕಾದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ ಸಮುದಾಯದ ಕೊಡುಗೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸ ಎಂಬ ಘೋಷಣೆಯನ್ನು ಅಧಿಕೃತಗೊಳಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಹಿಂದೂಗಳು ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ನವರಾತ್ರಿ, ದಸರಾ, ದುರ್ಗಾ ಪೂಜೆ, ದೀಪಾವಳಿ ಹಬ್ಬಗಳನ್ನು ಆಚರಿಸುತ್ತಾರೆ. ಆದ್ದರಿಂದ ಅಮೆರಿಕದ ಹಿಂದೂ ಸಂಘಟನೆಗಳು ಅಕ್ಟೋಬರ್ ತಿಂಗಳನ್ನು ಹಿಂದೂಗಳ ಪಾರಂಪರಿಕ ಮಾಸವನ್ನಾಗಿ ಆಚರಿಸಲು ನಿರ್ಧರಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.