ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ತನಿಖೆ ತೀವ್ರ: ಬ್ರಿಟನ್ ನಲ್ಲಿ ಪ್ರಕರಣಗಳ ಹೆಚ್ಚಳ
ಡೆಲ್ಟಾ ವೈರಾಣುವಿಗಿಂತ ಡೆಲ್ಟಾ ಪ್ಲಸ್ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದ್ದು, ಆರೋಗ್ಯ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ. ಇದೇ ವೇಳೆ ಆರೋಗ್ಯಾಧಿಕಾರಿಗಳು ಕೊರೊನಾ ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಲಂಡನ್: ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರಿ ತಳಿಯ ವೈರಾಣು ಸೋಂಕು ಇತ್ತೀಚಿನ ದಿನಗಳಲ್ಲಿ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ದೇಶದಾದ್ಯಂತ ಕಟ್ಟೆಚ್ಚರದಿಂದ ನಿಗಾ ಇರಿಸಲಾಗುತ್ತಿದೆ.
ಡೆಲ್ಟಾ ಪ್ಲಸ್ ವೈರಾಣುವನ್ನು ವೇರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್ (VUI) ಅಡಿ ನಿಗಾ ಇರಿಸಿದೆ. ಇದೇ ವೇಳೆ ಆರೋಗ್ಯಾಧಿಕಾರಿಗಳು ಕೊರೊನಾ ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಡೆಲ್ಟಾ ವೈರಾಣುವಿಗಿಂತ ಡೆಲ್ಟಾ ಪ್ಲಸ್ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದ್ದು, ಆರೋಗ್ಯ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ.
ಬ್ರಿಟನ್ ಆರೋಗ್ಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ಭಾರತದಲ್ಲಿ ಮೊದಲು ಕಂಡು ಬಂದಿದ್ದ ಡೆಲ್ಟಾ ವೈರಾಣು ವೇರಿಯೆಂಟ್ ಆಫ್ ಕನ್ಸರ್ನ್ ಪಟ್ಟಿಗೆ ಸೇರಿಸಲಾಗಿತ್ತು. ನಂತರದ ದಿನಗಳಲ್ಲಿ ಬ್ರಿಟನ್ ನಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ಶೇ.೯೯.೮ ಪ್ರತಿಶತ ಮಂದಿ ಡೆಲ್ಟಾ ವೈರಾಣುವಿಗೆ ತುತ್ತಾಗಿದ್ದರು.
ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ಅಲ್ಲಿನ ಅಧಿಕಾರಿಗಳ ನಿದ್ದೆಗೆಡಿಸಿದೆ. ಈ ಕಾರಣಕ್ಕೆ ಡೆಲ್ಟಾ ಪ್ಲಸ್ ವೈರಾಣುವನ್ನು ಕುರಿತು ಅಧ್ಯಯನ ನಡೆಸಲಾಗುತ್ತಿದೆ.
Related Article
ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ: 59 ಹೊಸ ಪ್ರಕರಣಗಳು ಪತ್ತೆ
ಬೆಂಗಳೂರಿಗರೇ ಎಚ್ಚರ.. ನಗರದಲ್ಲಿ ಡೆಲ್ಟಾ ರೂಪಾಂತರದ 2 ಉಪ ವಂಶಾವಳಿ ಪತ್ತೆ!
ಉತ್ತರಾಖಂಡ: ನೈನಿತಾಲ್‌ನಲ್ಲಿ ಡೆಲ್ಟಾ ಪ್ಲಸ್ ಎವೈ 2 ಕೊರೋನಾ ವೈರಸ್‌ನ ಮೂರು ಪ್ರಕರಣ ಪತ್ತೆ
ಡೆಲ್ಟಾ ರೂಪಾಂತರಿ ವೇಗದ ಮತ್ತು ಪ್ರಬಲ ಸೋಂಕು: ಐಸಿಎಂಆರ್
ಕೊರೋನಾ ಸೋಂಕು ಪ್ರಕರಣಗಳ ದಿಢೀರ್ ಹೆಚ್ಚಳಕ್ಕೆ ಡೆಲ್ಟಾ ವೈರಾಣು ಕಾರಣ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


