4 ತಿಂಗಳ ಬಳಿಕ ಟಿಕ್‌ಟಾಕ್ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡ ಪಾಕ್
ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಬರೋಬ್ಬರಿ 4 ತಿಂಗಳ ಬಳಿಕ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಬರೋಬ್ಬರಿ 4 ತಿಂಗಳ ಬಳಿಕ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.
ಕಳೆದ 15 ತಿಂಗಳಲ್ಲಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ನಾಲ್ಕನೇ ಬಾರಿಗೆ ಈ ನಿಷೇಧ ವಿಧಿಸಿದ್ದು, ಈಗ ತೆಗೆದು ಹಾಕಿದೆ. ಟಿಕ್‌ಟಾಕ್ ಆ್ಯಪ್‌ನಲ್ಲಿನ ಅನೈತಿಕ, ಅಶ್ಲೀಲ ಮತ್ತು ಅಸಭ್ಯ ವಿಷಯಗಳ ಕುರಿತು ವ್ಯಾಪಕವಾದ ದೂರುಗಳು ಬಂದ ಮೇಲೆ ಪಾಕಿಸ್ತಾನ ಸರ್ಕಾರವು ಅಕ್ಟೋಬರ್ 2020 ರಲ್ಲಿ ನಿರ್ಬಂಧಿಸಿತ್ತು.
ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡುವ ಬಳಕೆದಾರರನ್ನು ನಿರ್ಬಂಧಿಸುವುದಾಗಿ ಟಿಕ್‌ಟಾಕ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್‌ಟಾಕ್ ಮೇಲಿನ ನಿಷೇದವನ್ನು ರದ್ದುಪಡಿಸಿದೆ ಎಂದು ತಿಳಿದುಬಂದಿದೆ.
ಚೀನಾದ ಬೈಟ್‌ಡ್ಯಾನ್ಸ್‌ನ ಒಡೆತನದ ಈ ಅಪ್ಲಿಕೇಶನ್, ಪಾಕಿಸ್ತಾನದಲ್ಲಿ ಸುಮಾರು 39 ಮಿಲಿಯನ್ ಡೌನ್‌ಲೋಡ್ ಆಗಿದೆ. ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಾಕಿಸ್ತಾನ, ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ಟಿಕ್‌ಟಾಕ್ ಅನ್ನು ಒತ್ತಾಯಿಸಿತ್ತು. ಅಸಭ್ಯ ವಿಷಯಗಳ ಹರಡುವಿಕೆಯನ್ನು ನಿಯಂತ್ರಿಸುವುದಾಗಿ ಚೀನಾ ಆ್ಯಪ್ ಭರವಸೆ ನೀಡಿದ ಮೇಲೆ ಟಿಕ್‌ಟಾಕ್ ಮೇಲಿನ ನಿಷೇಧ ಹಿಂಪಡೆಯಲಾಯಿತು.
ಪಾಕಿಸ್ತಾನವು ಕಂಟೆಂಟ್ ಬಗ್ಗೆ ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ನೂರಾರು ದೂರುಗಳನ್ನು ರವಾನಿಸಿದೆ. ಇದು ಪಾಕಿಸ್ತಾನಿ ಕಾನೂನಿಗೆ ವಿರುದ್ಧವಾದ ಇಸ್ಲಾಂಗೆ ಆಕ್ರಮಣಕಾರಿ ಮತ್ತು ಸಂಭಾವ್ಯ ಅವಮಾನಕರವಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


