ವಿದೇಶ

ವುಹಾನ್ ಲ್ಯಾಬ್ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿತ್ತು: ಅಮೆರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಪೊಂಪಿಯೊ

ಕೋವಿಡ್-19 ಸಾಂಕ್ರಾಮಿಕ ರಹಸ್ಯ ಪ್ರಯೋಗಾಲಯದಿಂದ ಹೊರಹೊಮ್ಮಿತು ಎಂಬ ಸಿದ್ದಾಂತದ ಹೊಸ ಪರಿಶೀಲನೆ ನಡುವೆ ವುಹಾನ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿ, ಅದರ ನಾಗರಿಕ ಸಂಶೋಧನೆಯೊಂದಿಗೆ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ಅಮೆರಿಕಾದ ಮಾಜಿ ಸೆಕ್ರಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ ಹೇಳಿದ್ದಾರೆ.

ವುಹಾನ್ ಲ್ಯಾಬ್ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿತ್ತು: ಅಮೆರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಪೊಂಪಿಯೊ
ಮೈಕ್ ಪೊಂಪಿಯೊ
Published On :

ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ರಹಸ್ಯ ಪ್ರಯೋಗಾಲಯದಿಂದ ಹೊರಹೊಮ್ಮಿತು ಎಂಬ ಸಿದ್ದಾಂತದ ಹೊಸ ಪರಿಶೀಲನೆ ನಡುವೆ ವುಹಾನ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿ, ಅದರ ನಾಗರಿಕ ಸಂಶೋಧನೆಯೊಂದಿಗೆ ಮಿಲಿಟರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ಅಮೆರಿಕಾದ ಮಾಜಿ ಸೆಕ್ರಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ ಹೇಳಿದ್ದಾರೆ.

ನಾನು ಖಚಿತವಾಗಿ ಇದನ್ನು ಹೇಳುತ್ತೇನೆ. ವುಹಾನ್ ಲ್ಯಾಬೊರೇಟರಿ ಒಳಗಡೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಸಂಪರ್ಕ ಕಲ್ಪಿಸುವ ಪ್ರಯತ್ನಗಳಲ್ಲಿ  ನಿರತರಾಗಿದ್ದರು ಎಂಬುದು ನಮಗೆ ತಿಳಿದಿತ್ತು. ಆದ್ದರಿಂದ ಹಳೆಯ ಉತ್ತಮ ನಾಗರಿಕ ಸಂಶೋಧನೆ ಎಂದು ಹೇಳಿಕೊಳ್ಳುವುದರ ಜೊತೆಗೆ ಮಿಲಿಟರಿ ಚಟುವಟಿಕೆಯಲ್ಲಿ ತೊಡಿಗಿಸಿಕೊಂಡಿದ್ದರು ಎಂದು ಪೊಂಪಿಯೊ ಹೇಳಿರುವುದಾಗಿ ಪಾಕ್ಸ್ ನ್ಯೂಸ್ ವರದಿ ಮಾಡಿದೆ.

ಅದು ಏನೆಂದು ನಮಗೆ ಹೇಳಲು ಅವರು ನಿರಾಕರಿಸಿದರು. ಆ ಎರಡರ ಸ್ವರೂಪವನ್ನು ವಿವರಿಸಲು ಅವರು ತಿರಸ್ಕರಿಸಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಅಲ್ಲಿಗೆ ಹೋಗಲು ಪ್ರಯತ್ನಿಸಿದಾಗಲೂ ಅವಕಾಶ ನೀಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಸಾಂಕ್ರಾಮಿಕದ ಹುಟ್ಟಿನ ಬಗ್ಗೆ ಚೀನಾದ ಬಗ್ಗೆ ಒತ್ತಡ ಹೆಚ್ಚಾಗಿದ್ದು, ವಿಜ್ಞಾನಿಗಳು ಕೂಡಾ ಹೆಚ್ಚಿನ ಸ್ಪಷ್ಟತೆ ಬಯಸಿದ್ದಾರೆ. 
ಇತ್ತೀಚಿಗೆ ಸ್ಕೈ ನ್ಯೂಸ್ ಆಸ್ಟ್ರೇಲಿಯಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಚೀನಾದಿಂದ ವಿಶ್ವ ವೈಜ್ಞಾನಿಕ ಸಮುದಾಯವನ್ನು
ಮೋಸಗೊಳಿಸಲಾಗಿದೆ ಎಂದು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಮೆಡಿಸಿನ್ ಮತ್ತು ಸಾರ್ವಜನಿಕ ಆರೋಗ್ಯ ಕಾಲೇಜಿನ ಪ್ರಾಧ್ಯಾಪಕ 
ನಿಕೊಲಾಯ್ ಪೆಟ್ರೋವ್ಸ್ಕಿ ಹೇಳಿದ್ದರು.

ವುಹಾನ್ ಲ್ಯಾಬ್ ನಿಂದ ಸಾಂಕ್ರಾಮಿಕ ಸೃಷ್ಟಿಯಾಗಿರುವ ಕುರಿತಂತೆ ಹೆಚ್ಚಿನ ತನಿಖೆಗಾಗಿ ಬಿಡೆನ್ ಆಡಳಿತ ಚೀನಾವನ್ನು ಒತ್ತಾಯಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.