ವಿದೇಶ

ಅಮೆರಿಕದ ಒಹಿವೊದಲ್ಲಿ ಶೂಟೌಟ್‍: ಕನಿಷ್ಠ ಮೂವರು ಸಾವು

ಅಮೆರಿಕದ ಒಹಿವೊ ರಾಜ್ಯದ ವೆಸ್ಟ್‍ ಜಾಫರ್ ಸನ್‍ ಪಟ್ಟಣದಲ್ಲಿ ಗುಂಡು ಹಾರಿಸಿ ಕನಿಷ್ಠ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಮಂಗಳವಾರ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಅಮೆರಿಕದ ಒಹಿವೊದಲ್ಲಿ ಶೂಟೌಟ್‍: ಕನಿಷ್ಠ ಮೂವರು ಸಾವು
ಸಾಂದರ್ಭಿಕ ಚಿತ್ರ
Published On :

ಮಾಸ್ಕೋ: ಅಮೆರಿಕದ ಒಹಿವೊ ರಾಜ್ಯದ ವೆಸ್ಟ್‍ ಜಾಫರ್ ಸನ್‍ ಪಟ್ಟಣದಲ್ಲಿ ಗುಂಡು ಹಾರಿಸಿ ಕನಿಷ್ಠ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಮಂಗಳವಾರ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಅಪಾರ್ಟ್‍ಮೆಂಟ್‍ ವೊಂದರ ಸಮೀಪದಿಂದ ಗುಂಡಿನ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ನಿವಾಸಿಗಳು ಸಂಜೆ 5.27ಕ್ಕೆ ಮಾಹಿತಿ ನೀಡಿದ್ದಾರೆ ಎಂದು ವೆಸ್ಟ್‍ ಜಫರ್‍ ಸನ್‍ ಪೊಲೀಸ್ ಮುಖ್ಯಸ್ಥ ಕ್ರಿಸ್ಟೋಫರ್ ಫ್ಲಾಯ್ಡ್‍ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಗುಂಡಿನ ದಾಳಿಯಿಂದ ಅನೇಕರು ಗಾಯಗೊಂಡಿರುವುದು ಕಂಡುಬಂದಿದೆ. ಇವರಲ್ಲಿ ಮನೆಯಲ್ಲಿದ್ದ ಮೂವರು ಸೇರಿದ್ದಾರೆ ಎಂದು ಕೊಲಂಬಸ್ ಡಿಸ್‍ಪ್ಯಾಚ್‍ ದಿನಪತ್ರಿಕೆ ವರದಿ ಮಾಡಿದೆ.

ಘಟನೆ ಕುರಿತು ತನಿಖೆಗೆ ಒಹಿವೊ ಅಪರಾಧ ಬ್ಯೂರೋ ಮತ್ತು ಕೌಂಟಿ ಷರೀಫ್‍ ಕಚೇರಿ ಪೊಲೀಸರಿಗೆ ನೆರವಾಗುತ್ತಿವೆ. ಕಾರಿನಿಂದ ಗುಂಡು ಹಾರಿಸಿರಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.