ಕದನ ವಿರಾಮಕ್ಕೆ ಇಸ್ರೇಲ್, ಹಮಾಸ್ ದಿಢೀರ್ ಒಪ್ಪಿಗೆ: 11 ದಿನಗಳ ಸಂಘರ್ಷ ಅಂತ್ಯ, ಗಾಜಾ ನಿವಾಸಿಗಳ ಸಂಭ್ರಮ!
ಗಾಜಾ ಸಿಟಿಯಲ್ಲಿ 11 ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಇದೀಗ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.

ಟೆಲ್ ಅವಿವ್: ಗಾಜಾ ಸಿಟಿಯಲ್ಲಿ 11 ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಇದೀಗ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.
ಗಾಜಾ ಪ್ರದೇಶದಲ್ಲಿ 11 ದಿನಗಳ ಮಿಲಿಟರಿ ಕಾರ್ಯಾಚರಣೆಯನ್ನು ತಡೆಯಲು ಏಕಪಕ್ಷೀಯ ಕದನ ವಿರಾಮಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭದ್ರತಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಇಸ್ರೇಲ್ ಮಾಧ್ಯಮ ಗುರುವಾರ ತಡರಾತ್ರಿ ತಿಳಿಸಿದೆ.ಇನ್ನು ಹಮಾಸ್ ಸಂಘಟನೆಯೂ ಕದನ ವಿರಾಮವನ್ನು ದೃಢಪಡಿಸಿದ್ದು ಇದು ಶುಕ್ರವಾರ ಬೆಳಗ್ಗೆ 2 ಗಂಟೆಗೆ ಜಾರಿಗೆ ಬರಲಿದೆ.
ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ರಾಯಭಾರಿ ಟೋರ್ ವೆನ್ನೆಸ್ಲ್ಯಾಂಡ್ ಅವರು ಗಾಜಾ ಪಟ್ಟಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಯಹೂದಿ ಹಾಗೂ ಮುಸ್ಲಿಂರ ಪ್ರವಿತ್ರ ಸ್ಥಳವಾಗಿರುವ ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು ಇಲ್ಲಿ ಉಂಟಾಗಿದ್ದ ಸಂಘರ್ಷವನ್ನು ತಡೆಯಲು ಪೊಲೀಸರು ಅಶ್ರುವಾಯು ಹಾಗೂ ಗ್ರೆನೇಡ್ ದಾಳಿ ನಡೆಸಿದ್ದರು. ಇದು ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.
ಮೇ 10ರಂದು ಸಂಘರ್ಷ ಪ್ರಾರಂಭವಾದಾಗಿನಿಂದ, ಇಸ್ರೇಲ್ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿತ್ತು. ಹಮಾಸ್‌ನ ಮೂಲಸೌಕರ್ಯ ಕೇಂದ್ರಗಳು, 9 ಕಿ.ಮೀ ಉದ್ದ ಉಗ್ರ ಸುರಂಗಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಗಾಜಾದ ವಸತಿ ಪ್ರದೇಶಗಳಲ್ಲಿ ಅಡಗಿದ್ದ ಹಮಾಸ್ ಮತ್ತು ಇತರ ಉಗ್ರಗಾಮಿ ಗುಂಪುಗಳು ಇಸ್ರೇಲಿ ನಗರಗಳ ಮೇಲೆ 4,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದವು.
ಗಾಜಾದ ಆರೋಗ್ಯ ಅಧಿಕಾರಿಗಳ ಪ್ರಕಾರ ಕನಿಷ್ಠ 230 ಪ್ಯಾಲೆಸ್ಟೀನಿ ಜನರು ಸಾವನ್ನಪ್ಪಿದ್ದಾರೆ, ಇಸ್ರೇಲ್ ನಲ್ಲಿ 12 ಜನರು ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


