ಭಾರತಕ್ಕೆ ಆಮ್ಲಜನಕ ಪೂರೈಕೆಗಾಗಿ 10 ಮಿಲಿಯನ್ ಡಾಲರ್ ನೆರವು ಘೋಷಿಸಿದ ಉದ್ಯಮಿ ವಿನೋದ್ ಖೋಸ್ಲಾ
ಭಾರತದಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆಗಾಗಿ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಭಾರತೀಯ- ಅಮೆರಿಕನ್ ಮೂಲದ ಕೋಟ್ಯಾಧಿಪತಿ ಉದ್ಯಮಿ ವಿನೋದ್ ಖೋಸ್ಲಾ ಘೋಷಿಸಿದ್ದಾರೆ.

ಹೂಸ್ಟನ್: ಭಾರತದಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆಗಾಗಿ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಭಾರತೀಯ- ಅಮೆರಿಕನ್ ಮೂಲದ ಕೋಟ್ಯಾಧಿಪತಿ ಉದ್ಯಮಿ ವಿನೋದ್ ಖೋಸ್ಲಾ ಘೋಷಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ, ಸನ್ ಮೈಕ್ರೊಸಿಸ್ಟಮ್ ಸಹ ಸಂಸ್ಥಾಪಕರಾಗಿರುವ
ವಿನೋದ್ ಖೋಸ್ಲಾ, ಆಕ್ಸಿಜನ್ ಪೂರೈಸಲು ಆಸ್ಪತ್ರೆಗಳಿಗೆ ಹಣ ನೀಡಲು ಮುಂದಾಗಿದ್ದಾರೆ.
ಭಾನುವಾರ ಟ್ವೀಟರ್ ನಲ್ಲಿ ಈ ವಿಷಯ ತಿಳಿಸಿರುವ ವಿನೋದ್ ಖೋಸ್ಲಾ, ಹೆಚ್ಚಿನ ವಿಳಂಬವು ಹೆಚ್ಚಿನ ಸಾವುಗಳಿಗೆ ಕಾರಣವಾಗುವುದರಿಂದ ಜೀವಗಳನ್ನು ಉಳಿಸುವ ಅವಶ್ಯಕತೆಯಿದೆ ಎಂದಿದ್ದಾರೆ.
20 ಸಾವಿರ ಆಕ್ಸಿಜನ್ ಸಾಂದ್ರಕಗಳು, 15 ಸಾವಿರ ಆಕ್ಸಿಜನ್ ಸಿಲಿಂಡರ್ ಗಳು, 500 ಐಸಿಯು ಬೆಡ್ ಗಳು ಸೇರಿದಂತೆ ವಿವಿಧ ವೈದ್ಯಕೀಯ ನೆರವು ಕೋರಿ ಭಾರತದಲ್ಲಿನ ಆಸ್ಪತ್ರೆಗಳಿಂದ ಪ್ರತಿನಿತ್ಯ ಮನವಿ ಬರುತ್ತಿದ್ದು, ತುರ್ತಾಗಿ ನಾವು ಹೆಚ್ಚು ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಹೇಳಿದಂತೆ ಭಾರತಕ್ಕೆ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಖೋಸ್ಲಾ ಕುಟುಂಬ ನೀಡಲಿದ್ದು, ಇತರರು ಈ ತುರ್ತು ಅಗತ್ಯ ಪೂರೈಸಲು ಮುಂದಾಗುವ ವಿಶ್ವಾಸವಿದೆ ಎಂದು ಖೋಸ್ಲಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


